ಕರ್ನಾಟಕ

karnataka

ETV Bharat / state

ಬೆಂಗಳೂರು: ಮಾದಕ ದಂಧೆಯಿಂದ ಕೋಟಿ ಕೋಟಿ ಗಳಿಸಿದವನ ಆಸ್ತಿ ಮುಟ್ಟುಗೋಲು - etv bharat kannada

ಮಾದಕ ಸರಬರಾಜು ದಂಧೆ ಮೂಲಕ ಗಳಿಸಿದ್ದ ಆರೋಪಿಯ ಆಸ್ತಿಯನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಮುಟ್ಟುಗೋಲು ಹಾಕಿಕೊಂಡಿದೆ.

ccb-attaches-property-of-drugs-case-accused
ಮಾದಕ ದಂಧೆಯಿಂದ ಕೋಟಿ ಕೋಟಿ ಗಳಿಸಿದವನ ಆಸ್ತಿ ಮುಟ್ಟುಗೋಲು

By

Published : Sep 17, 2022, 1:40 PM IST

ಬೆಂಗಳೂರು:ಮಾದಕ ಸರಬರಾಜು ದಂಧೆ ಮೂಲಕ ಗಳಿಸಿದ್ದ ಆರೋಪಿಯ ಆಸ್ತಿಯನ್ನು ಸಿಸಿಬಿ ಮುಟ್ಟುಗೋಲು ಹಾಕುವ ಮೂಲಕ ದಂಧೆಕೋರರಿಗೆ ಖಡಕ್​ ಎಚ್ಚರಿಕೆ ನೀಡಿದೆ. ಮೃತ್ಯುಂಜಯ ಎಂಬ ಆರೋಪಿ ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿಯನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ‌.

2007ರಿಂದಲೂ ಸುಮಾರು 9 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೃತ್ಯುಂಜಯ ಇದೇ ವರ್ಷ ಜುಲೈನಲ್ಲಿ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಬಂಧಿತನಿಂದ 80 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿತ್ತು.

ಆರೋಪಿಯ ಹೆಸರಿನಲ್ಲಿದ್ದ ಹೊಸಕೋಟೆ ಟೌನ್​ನ 1 ವಾಣಿಜ್ಯ ನಿವೇಶನ, ಕೋಲಾರದ ಕೆಂಚಿಪುರ ಹಾಗೂ ಕಂಬಿಪುರದಲ್ಲಿರು 2 ನಿವೇಶನಗಳು, 6 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44,387 ರೂ. ಹಣ ಜಪ್ತಿ ಮಾಡಲಾಗಿದೆ. ಆರೋಪಿಯ ಪತ್ನಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಮೂಲದಿಂದ 5 ಕೋಟಿಗೂ ಅಧಿಕ ಹಣ ಅಕ್ರಮವಾಗಿ ಸಂದಾಯವಾಗಿರುವುದು ಸಹ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ಹಫ್ತಾ ಕೊಡದಿದ್ರೆ ಸಾಯಿಸ್ತೀನಿ ಎಂದ ರೌಡಿಶೀಟರ್ ಕುಳ್ಳ ಪೀಟರ್ ಸಿಸಿಬಿ ಬಲೆಗೆ

ABOUT THE AUTHOR

...view details