ಕರ್ನಾಟಕ

karnataka

ETV Bharat / state

ಸಿಸಿಬಿ ಪೊಲೀಸರಿಂದ ಇಬ್ಬರು ಕುಖ್ಯಾತ ರೌಡಿಗಳ ಬಂಧನ

ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿಶೀಟರ್​​ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಕುಖ್ಯಾತ ರೌಡಿಗಳನ್ನು ಬಂಧಿಸಿದ ಸಿಸಿಬಿ

By

Published : Oct 25, 2019, 1:02 PM IST

ಬೆಂಗಳೂರು: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಕುಖ್ಯಾತ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ ಅಲಿಯಾಸ್​ ಕ್ಯಾಟ್ ಮಂಜ, ಸತ್ಯಾ ಗೌಡ ಬಂಧಿತ ರೌಡಿ ಶೀಟರ್​ಗಳು.

ಕ್ಯಾಟ್ ಮಂಜ ಅಕ್ರಮ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಜೂಜು ಸಂಬಂಧಿಸಿದಂತೆ ಕಳೆದ 9 ವರ್ಷಗಳಿಂದ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಜಾಮೀನು ಪಡೆದು ಹೊರಬಂದ ಮೇಲೂ ಬುದ್ಧಿ ಕಲಿಯದೆ ಹಳೆ ಚಾಳಿಯನ್ನೇ ಮುಂದುವರೆಸಿದ್ದ ಈತ 2 ಕೊಲೆ ಪ್ರಯತ್ನ, 2 ದರೋಡೆ ಕೃತ್ಯಗಳಿಗೆ ಸಂಚು ರೂಪಿಸಿದ್ದಾನೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ (ಸಂಗ್ರಹ ಚಿತ್ರ)
ಇನ್ನೊಬ್ಬ ರೌಡಿಶೀಟರ್​ ಸತ್ಯಾ ಗೌಡನ ಮೇಲೂ ಅನೇಕ ಪ್ರಕರಣಗಳಿದ್ದು ಈತ ಕೂಡಾ ಕಳೆದ 4 ವರ್ಷಗಳಿಂದ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಆರೋಪಿ 2 ಕೊಲೆ ಪ್ರಯತ್ನ,1 ದರೋಡೆಗೆ ಸಂಚು 1 ದೊಂಬಿ ಪ್ರಕರಣ, 2ಹಲ್ಲೆ,1ಬೆದರಿಕೆ ಪ್ರಕರಣ ಸೇರಿದಂತೆ 7 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು ಈತನನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿಚಾರಣೆ ಮುಂದುವರೆದಿದೆ.

ABOUT THE AUTHOR

...view details