ಕರ್ನಾಟಕ

karnataka

ETV Bharat / state

ಹವಾಲಾ ದಂಧೆ: ಇಬ್ಬರನ್ನು ಬಂಧಿಸಿದ ಸಿಸಿಬಿ - ಸಿಸಿಬಿ ಪೊಲೀಸರು ದಾಳಿ

ಹವಾಲಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಮೊಬೈಲ್ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ.

Arrest
Arrest

By

Published : Oct 9, 2020, 9:45 AM IST

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್ ಮಾಫಿಯಾ ಕುರಿತು ತನಿಖೆ ಮುಂದುವರೆಸಿರುವ ಸಿಸಿಬಿ, ಸದ್ಯಕ್ಕೆ ಹವಾಲಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ರಾಣಾ ಸಾಮ್ಲಾ ಬಿನ್ ಸಾಮ್ಲಾ, ಚೇತನ ಅಲಿಯಾಸ್ ಕಚ್ರಾಬಾಯ್ ಬಂಧಿತ ಆರೋಪಿಗಳು. ಬೆಂಗಳೂರು ನಗರದ ನಗರ್ತಕಪೇಟೆ ಬಳಿ ಇರುವ ಬಿಲ್ಡಿಂಗ್​​ನಲ್ಲಿ ಪಿ.ಎಂ ಎಂಟರ್ ಪ್ರೈಸಸ್​​ ಅಂಗಡಿಯಲ್ಲಿ ಇಬ್ಬರು ಅಸಾಮಿಗಳು ಅನಧಿಕೃತವಾಗಿ ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಸಂಘಟಿತ ರೀತಿಯಲ್ಲಿ ಲಕ್ಷಗಟ್ಟಲೆ ಹಣವನ್ನು ತಮ್ಮ ವಶದಲ್ಲಿಟ್ಟುಕೊಂಡು ಸರ್ಕಾರಕ್ಕೆ ತೆರಿಗೆ ಪಾವತಿಸದೆ ಹಣವನ್ನು ಹವಾಲಾ ಮೂಲಕ ಬೇರೆಯವರಿಗೆ ವರ್ಗಾವಣೆ ಮಾಡ್ತಿದ್ರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಗಳಿಂದ ಮೊಬೈಲ್ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಇವರ ಜೊತೆ ಹವಾಲಾ ದಂಧೆಯಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details