ಬೆಂಗಳೂರು: ಕೊರೊನಾದಿಂದ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡು ಸಾಲಕ್ಕಾಗಿ ಆ್ಯಪ್ಗಳ ಮೊರೆ ಹೋಗುತ್ತಿದ್ದು, ಸಾಲ ಕೊಡುವ ನೆಪದಲ್ಲಿ ಆ್ಯಪ್ಗಳು ಜನರಿಂದ ಹಣ ಸುಲಿಗೆ ಮಾಡುತ್ತಿದ್ದವು. ಇದರಿಂದ ಅನೇಕ ದೂರುಗಳು ಕೇಳಿ ಬಂದಿದ್ದು, ಈ ಸಂಬಂಧ ಸಿಸಿಬಿ ಮತ್ತು ಸಿಐಡಿ ತಂಡದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.
ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಈ ಕುರಿತಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕೊರೊನಾ ಮಹಾಮಾರಿಯಿಂದ ದೇಶದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಬಹುತೇಕ ಮಂದಿ ಕೆಲಸ ಕಳೆದುಕೊಂಡು ಹಣದ ಅವಶ್ಯಕತೆಯಿಂದ ನಾನಾ ಬ್ಯಾಂಕ್ಗಳಲ್ಲಿ ಸಾಲದ ಮೊರೆ ಹೋಗಿದ್ದಾರೆ. ಈ ವೇಳೆ ಸರಿಯಾದ ಸಮಯದಲ್ಲಿ ಹಣ ಸಿಗದಿದ್ದಾಗ ಸಾಲ ಕೊಡುವಂತಹ ಆ್ಯಪ್ಗಳಿಂದ ಹಣ ಪಡೆಯುತ್ತಿದ್ದಾರೆ.
ಇದನ್ನೆ ನೆಪವಾಗಿಟ್ಟುಕೊಂಡ ಚೀನಾ ಕಂಪೆನಿಗಳು ಸಾರ್ವಜನಿಕರಿಂದ ಹಣ ಪೀಕಲು ಮುಂದಾಗಿವೆ. ಸದ್ಯ ಈ ಆ್ಯಪ್ ನಡೆಸುತ್ತಿರುವ ಗ್ಯಾಂಗ್ ಲೋನ್ ಕೊಟ್ಟು ಮನಬಂದಷ್ಟು ಬಡ್ಡಿ, ಚಕ್ರ ಬಡ್ಡಿ ಸರ್ವಿಸ್ ಚಾರ್ಜಸ್ ಹೆಸರಲ್ಲಿ ದುಬಾರಿ ಹಣ ವಸೂಲಿ ಮಾಡ್ತಿದ್ದಾರೆ. ಹೀಗಾಗಿ ಇಂತಹ ಆ್ಯಪ್ಗಳಿಗೆ ಬ್ರೇಕ್ ಹಾಕಲು ಸಿಐಡಿ ಹಾಗೂ ಸಿಸಿಬಿ ತಂಡಗಳು ರೆಡಿಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದರು.
ಓದಿ: ಗೋ ಹತ್ಯೆ ನಿಷೇಧ ಮಸೂದೆ ಸುಗ್ರೀವಾಜ್ಞೆಗೆ ಸಚಿವ ಸಂಪುಟ ತೀರ್ಮಾನ; ಪ್ರಭು ಚವ್ಹಾಣ್
ಸೈಯದ್ ಅಹ್ಮದ್, ಸೈಯದ್ ಇರ್ಫಾನ್, ಆದಿತ್ಯ ಸೇನಾಪತಿ ಬಂಧಿತ ಆರೋಪಿಗಳು. ಇವರು ಅಕ್ರಮ ಆನ್ಲೈನ್ ಲೋನ್ ನೀಡುವ ಆ್ಯಪ್ಗಳನ್ನು ನಡೆಸುತ್ತಿದ್ದರು. ಇದರ ಮೂಲಕ ಸಾಲ ಪಡೆದ ಜನರಿಗೆ ಹೆಚ್ಚಿನ ಪ್ರಮಾಣದ ಬಡ್ಡಿ ಹಾಕುವುದು, ಹಣ ಕೊಡುವ ವೇಳೆ ಬೆದರಿಕೆ ಹಾಕುವುದನ್ನು ಮಾಡುತ್ತಿದ್ದರು. ಈ ಕುರಿತಂತೆ ಸೈಬರ್ ವಿಭಾಗದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಇಂತಹ ಅಕ್ರಮದ ಕುರಿತಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.
ಇದರ ತನಿಖೆ ನಡೆಸಲು ಸಿಸಿಬಿಯಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡು ಯಾರು ಯಾವ ಆ್ಯಪ್ಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೃತ್ಯವನ್ನು ಒಂದು ಕಂಪೆನಿಯ ಮೂಲಕ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. Money day, paisa pay, lone time, ₹ day, ₹ curt, in cash ಆ್ಯಪ್ಗಳ ಮೂಲಕ ಹಣದ ವ್ಯವಹಾರ ನಡೆಸುತ್ತಿದ್ದರು.
ಬಂಧಿತರಿಂದ 25 ಲ್ಯಾಪ್ಟಾಪ್ಗಳು, 118 ಮೊಬೈಲ್ಗಳು, 30 ಸಿಮ್ ಕಾರ್ಡ್ಗಳು ಸೇರಿದಂತೆ ಸೀಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಕಂಪೆನಿಗಳಿಗೆ ಭೇಟಿ ನೀಡಿ ಅಪಾರ ಪ್ರಮಾಣದಲ್ಲಿ ವಸ್ತುಗಳ ಜಪ್ತಿ ಮಾಡಿ ಹೆಚ್ಚಿನ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.