ಕರ್ನಾಟಕ

karnataka

ETV Bharat / state

ನಿವೇಶನದ ನಕಲಿ ದಾಖಲಾತಿ ಸೃಷ್ಟಿಸಿ ₹3 ಕೋಟಿ ಸಾಲ ಪಡೆದು ವೃದ್ಧೆಗೆ ವಂಚನೆ, ಐವರು ಸಿಸಿಬಿ ಬಲೆಗೆ

Five arrested who cheated old woman: ರಿಯಲ್ ಎಸ್ಟೇಟ್ ಬ್ರೋಕರ್‌ಗಳಾಗಿದ್ದ ಆರೋಪಿಗಳು ಅಂಬುಜಾಕ್ಷಿ ಎಂಬವರ ನಿವೇಶನದ ಮೂರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್​ಗಳಿಂದ ₹3 ಕೋಟಿಗೂ ಅಧಿಕ ಸಾಲ ಪಡೆದಿದ್ದರು.

Arrested Accused
ಬಂಧಿತ ಆರೋಪಿಗಳು

By ETV Bharat Karnataka Team

Published : Dec 22, 2023, 7:41 PM IST

ಬೆಂಗಳೂರು:ಅಸಹಾಯಕ ವೃದ್ಧೆಗೆ ಸಂಬಂಧಿಸಿದ ಆಸ್ತಿಗಳ ನಕಲಿ ದಾಖಲಾತಿ ಸೃಷ್ಟಿಸಿ ಹಾಗೂ ನಕಲಿ ಬ್ಯಾಂಕ್ ಖಾತೆ ತೆರೆದು 3 ಬ್ಯಾಂಕ್‌ಗಳಿಂದ 3 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಐವರನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್.ಅರುಣ್, ಟಿ.ಪಿ.ಶಿವಕುಮಾರ್ ಬಂಧಿತರು. ಜೆ.ಪಿ.ನಗರದ ನಿವಾಸಿ ಅಂಬುಜಾಕ್ಷಿ (75) ವಂಚನೆಗೊಳಗಾದವರು.

ಅಂಬುಜಾಕ್ಷಿ ಜೆ.ಪಿ.ನಗರದಲ್ಲಿ 1,350 ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಸ್ವಂತ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಮಕ್ಕಳು ವಿದೇಶದಲ್ಲಿದ್ದು, ಇವರೂ ಸಹ ವಿದೇಶಕ್ಕೆ ಹೋಗಿ ನೆಲೆಸಲು ಚಿಂತಿಸಿದ್ದರು. ಹೀಗಾಗಿ ತಮ್ಮ ಮನೆ ಮಾರಾಟ ಮಾಡುವ ವಿಚಾರವನ್ನು ರಿಯಲ್ ಎಸ್ಟೇಟ್ ಬ್ರೋಕರ್‌ಗಳಾಗಿದ್ದ ಆರೋಪಿಗಳಿಗೆ ತಿಳಿಸಿದ್ದರು.

ಇದೇ ನೆಪದಲ್ಲಿ ನಿವೇಶನದ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಸಲಿ ದಾಖಲೆಗಳ ರೀತಿಯಲ್ಲೇ ನಿವೇಶನದ 3 ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂಬುಜಾಕ್ಷಿಯವರ ಸಹಿ ಹೋಲುವ ಪೋರ್ಜರಿ ಸಹಿಗಳನ್ನು ಮಾಡಿದ್ದರು. ನಂತರ ಈ ದಾಖಲೆಗಳನ್ನು 3 ಬ್ಯಾಂಕ್‌ಗಳಿಗೆ ನೀಡಿ, ₹3 ಕೋಟಿಗೂ ಅಧಿಕ ಸಾಲ ಪಡೆದುಕೊಂಡು ಪರಾರಿಯಾಗಿದ್ದರು. ಸಾಲದ ವಿಚಾರವಾಗಿ ಬ್ಯಾಂಕ್ ಸಿಬ್ಬಂದಿ ಅಂಬುಜಾಕ್ಷಿ ಅವರನ್ನು ಸಂಪರ್ಕಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ಡಿ.14ರಂದು ಮಹಿಳೆಯು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಂಧಿತ ಆರೋಪಿಗಳು

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಮುಂದಿನ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವರ್ಗಾಯಿಸಿತ್ತು. ಆರೋಪಿಗಳು ಸಾಲ ಪಡೆದಿದ್ದ ಬ್ಯಾಂಕ್‌ಗಳಿಂದ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿದ ಸಿಸಿಬಿ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಪ್ರತಿ ನಿಮಿಷಕ್ಕೆ 84 ಸೈಬರ್ ವಂಚನೆ ಪ್ರಕರಣ ದಾಖಲು

ABOUT THE AUTHOR

...view details