ಕರ್ನಾಟಕ

karnataka

ETV Bharat / state

ಡ್ರಗ್ಸ್​ ಪ್ರಕರಣ: ತನಿಖೆಯಲ್ಲಿ ಬಯಲಾಯ್ತಾ ಸಿಸಿಬಿ ಎಸಿಪಿಯ ಮುಖವಾಡ!? - ಬೆಂಗಳೂರು ಅಪ್ಡೇಟ್‌

ಸ್ಯಾಂಡಲ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಆರ್ ಪರಿಶೀಲನೆ ನಂತರ ಹಿರಿಯ ಅಧಿಕಾರಿಗಳು ಎಸಿಪಿ ಮುಧುವಿಯವರನ್ನ ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

CCB ACP Mudhavi suspended
ಎಸಿಪಿ ಮುಧವಿ ಅಮಾನತ್ತು

By

Published : Oct 2, 2020, 1:31 PM IST

ಬೆಂಗಳೂರು: ಸ್ಯಾಂಡಲ್ ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಎಸಿಪಿ ಮುಧವಿ ಅಮಾನತಾಗಿದ್ದು, ಸದ್ಯ ತನಿಖಾಧಿಕಾರಿಗಳಿಗೆ ಮತ್ತಷ್ಟು ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗ್ತಿದೆ.

ಡ್ರಗ್ಸ್​​ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದ ವೇಳೆ, ಆರೋಪಿಗಳ ಜೊತೆ ಕೈ ಜೋಡಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಎಸಿಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಸಿಸಿಬಿ ಪೊಲೀಸರು ಆರೋಪಿಗಳ ಬಳಿಯಿಂದ ಹೇಳಿಕೆ ಪಡೆದು ಕೆಲ ದಾಖಲೆಗಳನ್ನ ಸಿಸಿಬಿ ಕಚೇರಿಯಲ್ಲಿ ಇಟ್ಟಾಗ, ಇದನ್ನ ದಾಖಲೆ ಸಮೇತ ಎಸಿಪಿ ಹಿಡಿದುಕೊಂಡು ಝೆರಾಕ್ಸ್ ಮಾಡಿ ಆರೋಪಿಗಳ ಪರ ವಕೀಲರಿಗೆ, ಹಾಗೂ ಸಂಬಂಧಿಕರಿಗೆ ನೀಡುತ್ತಿದ್ದ ವಿಚಾರ ಬಯಲಾಗಿದೆ ಎನ್ನಲಾಗುತ್ತಿದೆ.

ಸದ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜನಾ ಆಪ್ತ ಫಾಜಿಲ್ ತಲೆಮರೆಸಿಕೊಂಡಿದ್ದಾನೆ. ಈತನ ಜೊತೆ ಕೂಡ ಎಸಿಪಿ ಕೈಜೋಡಿಸಿದ್ದಾರೆ ಎಂಬ ಆರೋಪವಿದೆ. ಸಿಸಿಬಿ ತಂಡ ಆರೋಪಿ ಶೇಖ್ ಫೈಸಲ್ ಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕಡೆ ಫೈಸಲ್ ಜೊತೆ ಖಾಸಗಿ ಹೋಟೆಲ್​ನಲ್ಲಿ ಎಸಿಪಿ ಮೀಟಿಂಗ್ ಮಾಡಿದ್ದಾರೆ ಎಂದು ಹೇಳಲಾಗ್ತಿದ್ದು, ಈ ಬಗ್ಗೆ ಎಸಿಪಿ ಮುಧವಿ ಮಾಡಿರುವ ಕೃತ್ಯದ ಬಗ್ಗೆ ಸಿಡಿಆರ್ ಸಮೇತ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆ ಪಾರ್ಟಿ ಆಯೋಜಕ ವಿರೇನ್ ಖನ್ನಾ ಜೊತೆಯು ಎಸಿಪಿ ಸಂಪರ್ಕ ಇದ್ದು, ಬರೋಬ್ಬರಿ 84 ಬಾರಿ ವಿರೇನ್ ಖನ್ನಾ ಜೊತೆ ಸಂಭಾಷಣೆ ಮಾಡಿದ್ದಾರೆ‌. ಇದರ ಕಾಲ್ ಡಿಟೇಲ್ಸ್ ಕೂಡ ಸದ್ಯ ಸಿಸಿಬಿ ಕೈಸೇರಿದೆ ಎನ್ನಲಾಗ್ತಿದೆ.

ಸದ್ಯ ಎಸಿಪಿ ಸಿಡಿಆರ್ ಪರಿಶೀಲನೆ ನಂತರ ಹಿರಿಯ ಅಧಿಕಾರಿಗಳು ಎಸಿಪಿ ಮುಧುವಿಯವರನ್ನ ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸಿಸಿಬಿ ಹಿರಿಯ ಅಧಿಕಾರಿಗಳು ಎಸಿಪಿ ಅವ್ಯಹಾರದ ವರದಿಯನ್ನು ಕಮಿಷನರ್ ಗೆ ತಲುಪಿಸಿದ್ದು, ಕಮಿಷನರ್ ಡಿ.ಜಿ.ಗೆ ಎಸಿಪಿಯ ಭ್ರಷ್ಟಾಚಾರದ ವರದಿ ರವಾನಿಸಿದ್ದರು. ಈ ವರದಿಯನ್ನು ಸರ್ಕಾರಕ್ಕೆ ಡಿ.ಜಿ. ಪ್ರವೀಣ್ ಸೂದ್ ಕಳಿಸಿದ್ದು, ತನಿಖಾ ವರದಿ ಆಧರಿಸಿ ಸರ್ಕಾರ ಎಸಿಪಿ ಮುಧವಿ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ABOUT THE AUTHOR

...view details