ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಫ್ರೇಜರ್ ಟೌನ್ ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ಗೆ 2ನೇ ಬಾರಿ ಸಿಸಿಬಿ ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗ್ತಾರಾ ಅಥವಾ ಕಾರಣ ಹೇಳಿ ತಪ್ಪಿಸಿಕೊಳ್ತಾರಾ ಅನ್ನೋ ಕುತೂಹಲ ಕೆರಳಿಸಿದೆ.
ಬೆಂಗಳೂರು ಗಲಭೆ ಪ್ರಕರಣ: ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ಗೆ ಸಿಸಿಬಿ ನೋಟಿಸ್
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಫ್ರೇಜರ್ ಟೌನ್ ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ಗೆ 2ನೇ ಬಾರಿ ಸಿಸಿಬಿ ನೋಟಿಸ್ ನೀಡಿದೆ.
ಒಂದು ವೇಳೆ ವಿಚಾರಣೆಗೆ ಹಾಜರಾದರೆ ಈ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಜಾಕೀರ್ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಏಕೆಂದರೆ ತನಿಖೆ ಸದ್ಯ ಕೊನೆ ಹಂತಕ್ಕೆ ತಲುಪಿದ್ದು, ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ ಆರೋಪಿಗಳ ಬಂಧನ ಮಾತ್ರ ಬಾಕಿ ಇದೆ. ಹಾಗೆಯೇ ಪ್ರಾಥಮಿಕವಾಗಿ ಇದೇ 14ರ ಒಳಗಡೆ ದೋಷಾರೋಪ ಪಟ್ಟಿ ಸಲ್ಲಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಜಾಕೀರ್ ಹುಸೇನ್ ಆರೋಪಿಗಳ ಜೊತೆ ಕೈಜೋಡಿಸಿ ಕುಮ್ಮಕ್ಕು ನೀಡಿದ್ದಾರೆ ಎನ್ನಲಾಗ್ತಿದೆ. ಒಮ್ಮೆ ವಿಚಾರಣೆಗೆ ಹಾಜರಾದಾಗ ಪ್ರಕರಣಕ್ಕೆ ಬೇಕಾದ ಸರಿಯಾದ ಸಾಕ್ಷ್ಯ ನೀಡಿರಲಿಲ್ಲ. ಸದ್ಯ ಸಿಸಿಬಿ ಪೊಲೀಸರ ಬಳಿ ಪಕ್ಕಾ ಸಾಕ್ಷ್ಯ ಇದ್ದು, ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಲಿದ್ದಾರೆ.
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆ ನಡೆಯುವ ಮುನ್ನ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್ ಇಬ್ಬರೂ ಮೊಬೈಲ್ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಹಾಗೆಯೇ ಬಂಧಿತ ಕೆಲ ಆರೋಪಿಗಳ ಜೊತೆ ಮಾತುಕತೆ ನಡೆಸಿರುವ ವಿಚಾರ ಸದ್ಯ ತನಿಖೆಯಲ್ಲಿ ಬಯಲಾಗಿದೆ ಎಂದು ಹೇಳಲಾಗ್ತಿದೆ.