ಕರ್ನಾಟಕ

karnataka

ETV Bharat / state

ಫೋನ್​ ಕದ್ದಾಲಿಕೆ ಆರೋಪ ಪ್ರಕರಣ: ಅಲೋಕ್ ಕುಮಾರ್ ಮನೆ ಮೇಲೆ‌ ಸಿಬಿಐ ದಾಳಿ - ಪೋನ್ ಟ್ಯಾಪಿಂಗ್

ಫೋನ್ ಟ್ಯಾಪಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡಕ್ಕೆ ಇಂದು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್​ಕುಮಾರ್​ಗೆ ಇಮದು ಶಾಕ್​ ನೀಡಿದೆ. ಅಲೋಕ್ ಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆಗೆ ಸುಮಾರಿಗೆ 20 ಜನ ಅಧಿಕಾರಿಗಳ‌ ತಂಡ ದಿಢೀರ್ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಲೋಕ್ ಕುಮಾರ್ ಮನೆ ಮೇಲೆ‌ ಸಿಬಿಐ ದಾಳಿ

By

Published : Sep 26, 2019, 11:33 AM IST

ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಕಮಿಷನರ್ ಆಗಲು ಲಾಬಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಪೊಲೀಸರು ಇಂದು ಬೆಂಗಳೂರಲ್ಲಿ ಐಪಿಎಸ್​ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ನಗರದ ಮಾಜಿ ಪೊಲೀಸ್ ಅಯುಕ್ತ​ ಫೋನ್ ಟ್ಯಾಪಿಂಗ್ ಮಾಡಿದ್ದಾರೆಂದು ಹೆಸರು ಕೇಳಿ ಬಂದ ಹಿನ್ನೆಲೆ, ಸಿಬಿಐ ತಂಡ ವಿಚಾರಣೆಗೆ ಹಾಜರಾಗುವಂತೆ ಅಲೋಕ್​ಕುಮಾರ್ ಅವರಿಗೆ ನೋಟಿಸ್ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ನೀಡುವಂತೆ ಸೂಚಿಸಿತ್ತು ಎನ್ನಲಾಗ್ತಿದೆ.

ಅಲೋಕ್ ಕುಮಾರ್ ಮನೆ ಮೇಲೆ‌ ಸಿಬಿಐ ದಾಳಿ

ಫೋನ್ ಟ್ಯಾಪಿಂಗ್​ಗೆ ಸಂಬಂಧಿಸಿದಂತೆ ಸಿಬಿಐ ತಂಡಕ್ಕೆ ಪ್ರಕರಣಕ್ಕೆ ಬೇಕಾಗಿರುವ ಪೆನ್ ಡ್ರೈವ್ ಸಿಗದ ಹಿನ್ನೆಲೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆಗೆ ಸುಮಾರಿಗೆ 20 ಜನ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ.

ಫೋನ್ ಟ್ಯಾಪಿಂಗ್ ಆಗಿರುವ ಕುರಿತು ದಾಖಲೆಗಳಿಗಾಗಿ ಎಂ.ಜಿ. ರಸ್ತೆ ಬಳಿಯಿರುವ ಅಲೋಕ್​ ಕುಮಾರ್​ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ: ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ​ ನಗರದ ಮಾಜಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್​ ಅಣತಿಯಂತೆ ಫೋನ್ ಟ್ಯಾಪಿಂಗ್ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಗಂಭೀರವಾಗಿರುವ ಈ ಪ್ರಕರಣವನ್ನು ಪ್ರಸ್ತುತ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದೆ. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಇನ್​ಸ್ಪೆಕ್ಟರ್​ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಇಬ್ಬರೂ ಇನ್​ಸ್ಪಕ್ಟರ್​ಗಳು ಮಾಜಿ ಕಮಿಷನರ್ ಅಣತಿಯಂತೆ ಫೋನ್ ಟ್ಯಾಪ್ ಮಾಡಿ ಪೆನ್ ಡ್ರೈವ್ ಮೂಲಕ, ದೂರವಾಣಿ ಮಾಹಿತಿಯನ್ನು ಮಾಜಿ ಕಮಿಷನರ್​ಗೆ​ ನೀಡಿರುವ ವಿಚಾರವನ್ನು ಸಿಬಿಐ ಎದುರು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details