ಕರ್ನಾಟಕ

karnataka

ETV Bharat / state

ಫೋನ್ ಟ್ಯಾಪಿಂಗ್ ಪ್ರಕರಣ .. ತನಿಖೆ ಆರಂಭಿಸಿದ ಸಿಬಿಐ - ಕರ್ನಾಟಕ ರಾಜಕೀಯ ಸುದ್ದಿ

ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಐಪಿಎಸ್ ಅಧಿಕಾರಿ ಕಿರಣ್ ನೇತೃತ್ವದಲ್ಲಿ ರಾಜ್ಯಕ್ಕೆ ಕಾಲಿಟ್ಟಿದ್ದು ತನಿಖೆ ಆರಂಭಿಸಿದೆ.

ಸಿಬಿಐ ಅಧಿಕಾರಿಗಳು

By

Published : Sep 1, 2019, 7:39 PM IST

ಬೆಂಗಳೂರು :ರಾಜ್ಯ ರಾಜಕೀಯವನ್ನೇ ಬೆಚ್ಚಿ ಬೀಳಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಂದ ಸಿಬಿಐ ತಂಡ ಇಂದಿನಿಂದಲೇ ತನಿಖೆ ಕೈಗೊಂಡಿದೆ.

ಫೋನ್ ಟ್ಯಾಪಿಂಗ್ ಪ್ರಕರಣ ತನಿಖೆ ಆರಂಭಿಸಿದ ಸಿಬಿಐ ತಂಡ..

ಐಪಿಎಸ್ ಅಧಿಕಾರಿ ಕಿರಣ್ ನೇತೃತ್ವದ ತಂಡ ನಗರಕ್ಕೆ ಇಂದು ಮಧ್ಯಾಹ್ನ ಆಗಮಿಸಿದ್ದು, ಪ್ರಕರಣ ಸಂಬಂಧ ರಾಜ್ಯದ ಐಪಿಎಸ್ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದೆ. ನಂತರ ಆಡುಗೋಡಿಯಲ್ಲಿರುವ ಸಿಸಿಬಿ ಟೆಕ್ನಿಕಲ್ ಸೆಲ್‌ಗೆ ಭೇಟಿ ನೀಡಿದೆ. ಈ ವೇಳೆ ಟೆಕ್ನಿಕಲ್ ಸೆಲ್‌ನ ಮೂವರು ಇನ್ಸ್‌ಪೆಕ್ಟರ್‌ಗಳ ವಿಚಾರಣೆ ಮಾಡಲಾಯಿತು. ಯಾವ ರೀತಿ ಟೆಲಿಫೋನ್‌ಗಳು ಟ್ಯಾಪಿಂಗ್ ಆಗುತ್ತವೆ ಎಂಬ ಕುರಿತಂತೆ ಮಾಹಿತಿ ಪಡೆದರು.

ABOUT THE AUTHOR

...view details