ಕರ್ನಾಟಕ

karnataka

2 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಬುಲಾವ್​​​... ಡಿಕೆಶಿ ಮುಂದಿರುವ ಸವಾಲುಗಳೇನು?

By

Published : Oct 6, 2020, 8:56 AM IST

ಡಿಕೆ ಸಹೋದರರ ಮನೆ ಹಾಗೂ ಕಚೇರಿ ಮೇಲೆ ನಿನ್ನೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಸಮನ್ಸ್​ ಜಾರಿ ಮಾಡಲಾಗಿದೆ.

ಡಿಕೆಶಿಗೆ ಸಂಕಷ್ಟ
ಡಿಕೆಶಿಗೆ ಸಂಕಷ್ಟ

ಬೆಂಗಳೂರು:ಡಿಕೆ ಸಹೋದರರ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ನಿನ್ನೆ ಮುಂಜಾನೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಸಮನ್ಸ್​ ಜಾರಿ ಮಾಡಲಾಗಿದೆ. ಹೀಗಾಗಿ ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಾರಿ-ಬೆಂಗಳೂರು ಮುಖ್ಯ ರಸ್ತೆ ಗಂಗೇನಹಳ್ಳಿ ಬಳಿ ಇರುವ ಸಿಬಿಐ ಕಚೇರಿಯಲ್ಲಿ ಡಿಕೆಶಿ ವಿಚಾರಣೆ ನಡೆಯಲಿದೆ.

ಏಕಕಾಲದಲ್ಲಿ ಸುಮಾರು 14 ಕಡೆ ದಾಳಿ ನಡೆಸಿ ಡಿಕೆ ಬ್ರದರ್ಸ್ ಮುಂಭಾಗದಲ್ಲೇ ಪಂಚನಾಮೆ ಮಾಡಿದ ಅಧಿಕಾರಿಗಳ ತಂಡ, ಅಕ್ರಮ ಆಸ್ತಿಯ ಲೆಕ್ಕಾಚಾರದ ಕುರಿತು ಇಂದಿನಿಂದ ತನಿಖೆ ಮತ್ತಷ್ಟು ಚುರುಕುಗೊಳಿಸಲಿದ್ದಾರೆ. ಹೀಗಾಗಿ ಉಪ ಚುನಾವಣೆ ಎದುರು ಬರುತ್ತಿರುವ ಸಂದರ್ಭದಲ್ಲಿ ಸಿಬಿಐ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.

ಡಿಕೆಶಿ ಮುಂದಿರುವ ಸವಾಲು​:

  • ಆಸ್ತಿಯ ವಿವರದ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್
  • ಶೋಧ ವೇಳೆ ಸಿಕ್ಕ ಮಾಹಿತಿಗಳ ಪರಿಶೀಲನೆ
  • ಸಂಪಾದಿಸಿದ ಹಣ ಭ್ರಷ್ಟಾಚಾರದ್ದಲ್ಲ ಎಂಬ ಬಗ್ಗೆ ದಾಖಲೆ ನೀಡಬೇಕು
  • ವಿಚಾರಣೆಗೆ ಗೈರಾದರೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಂಧನ ಸಾಧ್ಯತೆ
  • ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ

ಎಲ್ಲಾ ದಾಖಲೆಗಳ ಸಲ್ಲಿಕೆಯ ಬಳಿಕ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆಯ ಆರೋಪದಿಂದ ಹೊರ ಬರುವ ಸಾಧ್ಯತೆಯಿದೆ. ಅಧಿಕಾರಕ್ಕೆ ಬಂದ ಡಿಕೆಶಿ ಕೇವಲ 5 ವರ್ಷದಲ್ಲಿ ಯಾವ ರೀತಿ ಆಸ್ತಿ ಮಾಡಿದ್ದು, ಆಸ್ತಿ ಮೂಲ ಯಾವುದು, ಎಫ್​ಐಆರ್​ನಲ್ಲಿ ದಾಖಲಾದ ಎಲ್ಲಾ ಅಂಶಗಳಿಗೆ ಡಿ.ಕೆ.ಶಿವಕುಮಾರ್ ಉತ್ತರ ನೀಡಬೇಕಾದದ್ದು ಅನಿವಾರ್ಯವಾಗಿದೆ. ಒಂದು ವೇಳೆ ಸಮನ್ಸ್​ ಜಾರಿಯಾದರೂ ಹಾಜರಾಗದೆ ತಪ್ಪಿಸಿಕೊಂಡರೆ ಡಿಕೆಶಿ ಭ್ರಷ್ಟಾಚಾರ ಕಾಯ್ದೆಯಡಿ ಬಂಧನವಾಗುವುದು ಖಚಿತವಾಗಿದೆ.

ವಿಚಾರಣೆಗೆ ಹಾಜರಾಗುವ ಮುನ್ನ ಡಿಕೆಶಿ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಲಿದ್ದಾರೆ. ಇಂದು ಡಿಕೆಶಿ ಮನೆಗೆ ಹಿರಿಯ ವಕೀಲ ಪೊನ್ನಣ್ಣ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಬಲವಂತದ ಕ್ರಮ ಕೈಗೊಳ್ಳದಂತೆ ಸಿಬಿಐಗೆ ಹೈಕೋರ್ಟ್ ಸೂಚಿಸಿದೆ. ಸದ್ಯ ಅಕ್ರಮ ಆಸ್ತಿ ಬಗ್ಗೆ ಸಿಬಿಐ ತನಿಖೆಗೆ ಇಳಿದಿದ್ದು, ಇಂದು ಕಡತಗಳ ಪರಿಶೀಲನೆ ನಡೆಯಲಿದೆ.

ABOUT THE AUTHOR

...view details