ಕರ್ನಾಟಕ

karnataka

ETV Bharat / state

ಜಾಮೀನು ಪಡೆದು ಹೊರಬಂದ್ರೂ ಬಿಡದ ಸಿಬಿಐ: ಮಾಜಿ ಡಿಸಿ ವಿಜಯಶಂಕರ್‌ ಮತ್ತೆ ವಿಚಾರಣೆ - Mansur Khan ima fraud case

ಜಾಮೀನು ಪಡೆದು ಹೊರ ಬಂದಿರುವ ಮಾಜಿ ಡಿಸಿ ವಿಜಯಶಂಕರ್ ಅವರನ್ನು ಸಿಬಿಐ ಮತ್ತೆ ವಿಚಾರಣೆಗೊಳಪಡಿಸಿದೆ.

ಮಾಜಿ ಡಿ.ಸಿ.ವಿಜಯಶಂಕರ್

By

Published : Sep 20, 2019, 5:53 PM IST

ಬೆಂಗಳೂರು : ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಒಂದು ಕಡೆ ಪ್ರಮುಖದ ಪ್ರಮುಖ ಆರೋಪಿ ಮನ್ಸೂರ್‌ನನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ರೆ, ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಂಗಳೂರು ನಗರ ಮಾಜಿ ಡಿಸಿ ವಿಜಯಶಂಕರ್ ಅವರನ್ನು ಸಿಬಿಐ ಕಚೇರಿಗೆ ಕರೆದು ಡ್ರಿಲ್‌ ಮಾಡುತ್ತಿದೆ.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಬಿಐ ಕಚೇರಿ

ಪ್ರಕರಣದ ಹಿನ್ನೆಲೆ:

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಡಿಸಿ ವಿಜಯ್ ಶಂಕರ್, ಮನ್ಸೂರ್ ಖಾನ್‌ನಿಂದ ಲಂಚ ಪಡೆದು ಐಎಂಎ ಸಂಸ್ಥೆಯ ನಕಲಿ ವರದಿಗೆ ಸಹಿ ಹಾಕಿ ಸರ್ಕಾರಕ್ಕೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ವಿಜಯ್ ಶಂಕರ್ ಅವರನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದ ಅವರು ಸ್ವಲ್ಪ ನಿರಾಳಗಿದ್ದರು.

ABOUT THE AUTHOR

...view details