ಬೆಂಗಳೂರು: ಪ್ರಕರಣ ಮುಚ್ಚಿಹಾಕಲು ಖಾಸಗಿ ಆಸ್ಪತ್ರೆಯೊಂದರ ಮ್ಯಾನೇಜರ್ಗೆ 1.50 ಲಕ್ಷ ರೂ.ಲಂಚ ಕೇಳಿದ ಆರೋಪದಡಿ ಬೈಯ್ಯಪ್ಪನಹಳ್ಳಿ ರೈಲ್ವೆ ಪಡೆ (ಆರ್‌ಪಿಎಫ್) ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ವಿರುದ್ಧ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆತ್ರೇಯಾ ಆಸ್ಪತ್ರೆಯ ನಿರ್ವಹಣಾ ವಿಭಾಗದ ಮ್ಯಾನೇಜರ್ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಇನ್ಸ್ಪೆಕ್ಟರ್ ಉಮೇಶ್ ಡಾಕರ್ ಹಾಗೂ ಕಾನ್ಸ್ಟೇಬಲ್ ರಾಘವೇಂದ್ರ ಎಂಬುವವರ ವಿರುದ್ಧ ಸಿಬಿಐನ ಎಸಿಬಿ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಬೈಯ್ಯಪ್ಪನಹಳ್ಳಿ ರೈಲ್ವೆ ಜಾಗದ ಸಮೀಪದಲ್ಲಿರುವ ಆಸ್ಪತ್ರೆಯು ನವೀಕರಣ ಕಾಮಗಾರಿ ಮುಗಿಸಿತ್ತು. ಕಳೆದ ತಿಂಗಳು(ಫೆಬ್ರವರಿ) 26 ರಂದು ರಿನೋವೇಷನ್ ಕಾರ್ಯಕ್ರಮಕ್ಕಾಗಿ ರೈಲ್ವೆ ಜಾಗ ಬಳಸಿಕೊಂಡಿತ್ತು. ಶಾಮಿಯಾನ ಸೇರಿದಂತೆ ಇತರ ಕಾರ್ಯಗಳಿಗೆ ನೆಲ ಅಗೆಯುವಾಗ ರೈಲ್ವೆ ಕೇಬಲ್ ಹಾನಿಯಾಗಿತ್ತು.