ಬೆಂಗಳೂರು:ಜಿ.ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸೆಷನ್ಸ್ ಕೋರ್ಟ್ಗೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ.
ರಾಜಕೀಯ ದುರುದ್ದೇಶದಿಂದ ಯೋಗೀಶ್ ಗೌಡ ಹತ್ಯೆಯಾಗಿದೆ. ಆರೋಪಿಗಳು ಎರಡು ಬಾರಿ ಹತ್ಯೆಗೆ ವಿಫಲ ಯತ್ನ ನಡೆಸಿದ್ದರು. ಮೊದಲು ಧಾರವಾಡದ ಸರಸ್ವತಿಪುರದ ಹಳೆಯ ಮನೆಯೊಂದರಲ್ಲಿ ಹತ್ಯೆಗೆ ಯೋಜನೆ ಹಾಕಿದ್ದರು. ನಂತರ 2016 ಜೂನ್ 11 ಮತ್ತು ಜೂನ್ 14 ರಂದು ಹತ್ಯೆಗೆ ಸಂಚು ರೂಪಿಸಿ ವಿಫಲ ಯತ್ನವಾಗಿ, ಮೂರನೇ ಬಾರಿ ಪ್ಲಾನ್ ಮಾಡಿ 2016 ಜೂನ್ 15 ರಂದು ಧಾರವಾಡದ ಸಪ್ತಾಪುರ ಬಳಿ ಕೊಲೆ ಮಾಡಿದ್ದರೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
2016 ರ ಏಪ್ರಿಲ್ 1 ರಿಂದ ಜೂನ್ 13 ರವರೆಗೆ ಬೆಂಗಳೂರಿಗೆ ಬಂದು ಹೋಗಿದ್ದ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ, ಮತ್ತೋರ್ವ ಆರೋಪಿ ದಿನೇಶ್ಗೆ ಬರೋಬ್ಬರಿ 322 ಬಾರಿ ಕರೆಮಾಡಿ ಕೊಲೆ ಮಾಡುವ ಕುರಿತು ಚರ್ಚೆ ನಡೆಸಿದ್ದ. ಪ್ರಭಾವಿ ರಾಜಕಾರಣಿಗಳು ಹಾಗೂ ಇನ್ನಷ್ಟು ಜನರು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ತಿಳಿಸಲಾಗಿದೆ.
ಪ್ರಕರಣದಲ್ಲಿ ಶರಣಾದವರ ವಿರುದ್ಧ ಮಾತ್ರ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿ ತೊಡಗಿದೆ. ಇತ್ತೀಚೆಗೆ ಹಾವೇರಿ ಎಎಸ್ಪಿ, ಕಮಿಷನರ್ ಹಾಗೂ ಇತರ ಕೆಲ ಅಧಿಕಾರಿಗಳನ್ನು ಹೆಬ್ಬಾಳದ ಗಂಗಾ ನಗರದ ಬಳಿಯ ಸಿಬಿಐ ಕಚೇರಿಗೆ ಕರೆಸಿ ಮಾಹಿತಿ ಪಡೆಯಲಾಗಿದೆ.