ಬೆಂಗಳೂರು:ರೈಲ್ವೆ ಟಿಕೆಟ್ಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರುತ್ತಿದ್ದ ಆರೋಪಿಯ ಒಂದೊಂದೇ ಮುಖವಾಡ ಕಳಚುತ್ತಿದೆ. ಈತನಿಗೆ ಪಾಕಿಸ್ತಾನದ ಜೊತೆ ಲಿಂಕ್ ಇರುವ ಮಾಹಿತಿ ಸದ್ಯ ಬಯಲಾಗಿದೆ.
ಭ್ರಷ್ಟಾಚಾರದಿಂದ ಅಕ್ರಮ ಹಣ ಮಾಡಿರುವ ಮಾಹಿತಿ ಮೇರೆಗೆ ಸಿಬಿಐ ಕೂಡ ಈತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಿದೆ.
2020 ಜನವರಿಯಲ್ಲಿ ಗುಲಾಮ್ ಮುಸ್ತಫಾನನ್ನ ಮೊದಲು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದರು. ಈತ ರೈಲ್ವೆಯ ANMS ಸಾಫ್ಟ್ವೇರ್ ಹ್ಯಾಕ್ ಮಾಡಿ ನಕಲಿ ಐಡಿ ತಯಾರಿಸಿ ಅದರ ಮೂಲಕ ಟಿಕೆಟ್ ಮಾರಾಟ ಮಾಡಿ ರೈಲ್ವೆಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ. ಈತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಸುಮಾರು 563 ನಕಲಿ ಐಡಿ ಸಿದ್ಧಪಡಿಸಿ ರೈಲ್ವೆ ಸಾಫ್ಟ್ವೇರ್ ಹ್ಯಾಕ್ ಮಾಡಲು ಪಾಕಿಸ್ತಾನದ ವೆಬ್ ಬಳಕೆ ಮಾಡಿದ ವಿಚಾರ ಸೈಬರ್ ಪೊಲೀಸರಿಗೆ ಗೊತ್ತಾಗಿದೆ.