ಕರ್ನಾಟಕ

karnataka

ETV Bharat / state

ಟೆಲಿಫೋನ್ ಕದ್ದಾಲಿಕೆ ಪ್ರಕರಣ...ಕದ್ದಾಲಿಕೆಯಲ್ಲಿ ಭಾಗಿಯಾದವರಿಗೆ ಇಂದು ಕೂಡ ಡ್ರಿಲ್​

ಟಿಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸಿದ್ದು,ಸಿಬಿಐ ನಿಂದ ಇಂದು ಕೆಎಸ್​ಆರ್​ಪಿ ಎಡಿಜಿಪಿ‌ ಅಲೋಕ್ ಕುಮಾರ್ ವಿಚಾರಣೆ ಸಾಧ್ಯತೆ ಇದೆ ಎನ್ನಲಾಗಿದೆ.

ಟೆಲಿಫೋನ್ ಕದ್ದಾಲಿಕೆ ಪ್ರಕರಣ ತನಿಖೆ ಚುರುಕು

By

Published : Sep 3, 2019, 1:51 PM IST

ಬೆಂಗಳೂರು: ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸಿದೆ. ಫೋನ್ ಟ್ಯಾಪಿಂಗ್ ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ಸ್​ಪೆಕ್ಟರ್ ಗಳಿಗೆ ಸಿಬಿಐ ಡ್ರಿಲ್ ಮಾಡಲು ಶುರುಮಾಡಿದ್ದಾರೆ‌.

ಹಿರಿಯ ಅಧಿಕಾರಿಗಳ ಮಾತು ಕೇಳಿ ನಂಬರ್ ಟ್ಯಾಪ್ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆ ಇಂದು ಸಿಬಿಐ ಟೀಂ ಇನ್ಸ್ ಪೆಕ್ಟರ್ ಗಳ ವಿಚಾರಣೆ ನಡೆಸ್ತಿದ್ದಾರೆ. ನಿನ್ನೆ ಸರ್ಕಾರಿ ರಜಾ‌ ಇದ್ರೂ ಸಿಬಿಐ ಟೀಮ್ ನಗರ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿನ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್​ನಲ್ಲಿ ಬಿಡು ಬಿಟ್ಟಿದ್ರು..ಕೇಸ್ ಕುರಿತಂತೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ರು.

ಟೆಲಿಫೋನ್ ಕದ್ದಾಲಿಕೆ ಪ್ರಕರಣ ತನಿಖೆ ಚುರುಕು

ಸಿಬಿಐ ನಿಂದ ಇಂದು ಕೆಎಸ್​ಆರ್​ಪಿ ಎಡಿಜಿಪಿ‌ ಅಲೋಕ್ ಕುಮಾರ್ ವಿಚಾರಣೆ ಸಾಧ್ಯತೆ...

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೋನ್​ ಕದ್ದಾಲಿಕೆ ಸಂಬಂಧಿಸಿದಂತೆ ಮೊದಲು ಈ ಪ್ರಕರಣವನ್ನ ರಾಜ್ಯಸರಕಾರ ಸಿಸಿಬಿ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್​ಗೆ ಕೆಲ ಮಾಹಿತಿ ಲಭ್ಯವಾಗಿತ್ತು‌.ಅದೇನಂದ್ರೆ ಮಾಜಿ ನಗರ ಪೊಲೀಸ್ ಆಯುಕ್ತ ಅಲೋಕ್ ಅವ್ರಿಗೆ ಭಾಸ್ಕರ್ ರಾವ್ ಅವರದ್ದು ಎನ್ನಲಾದ ಆಡಿಯೋವನ್ನ ಆಡುಗೋಡಿ ಟೆಕ್ನಿಕಲ್ ವಿಂಗ್ ನಿಂದ ಪೆನ್​ಡ್ರೈವ್ ಗೆ ಹಾಕಿ ಆಗಸ್ಟ್ 2 ರಂದು ಪೊಲೀಸ್ ಆಯುಕ್ತರ ಕಚೇರಿಗೆ ತಂದು ಸಿಸಿಬಿ ಟೆಕ್ನಿಕಲ್ ಇನ್ಸ್​ಪೆಕ್ಟರ್ ಪೆನ್​ಡ್ರೈವ್ ನಲ್ಲಿ ನೀಡಿದ್ರು.ಹೀಗಾಗಿ ಈ ಅಂಶವನ್ನ ಸಿಸಿಬಿ ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು.

ಸದ್ಯ ಪ್ರಕರಣ ಸಿಬಿಐ ವರ್ಗಾವಣೆ ಹಿನ್ನೆಲೆ ಘಟನೆ ನಡೆದಾಗ ಅಲೋಕ್ ಕುಮಾರ್ ಕಮಿಷನರ್ ಆಗಿದ್ದ ಕಾರಣ ಅಲೋಕ್ ಕುಮಾರ್ ರನ್ನು ಸಿಬಿಐ ಇಂದು ವಿಚಾರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details