ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣ.. ಇಂದೂ ಮುಂದುವರೆದ ಸಿಬಿಐ ವಿಚಾರಣೆ - ಎಸಿಪಿ ಅಧಿಕಾರಿಗಳ ವಿಚಾರಣೆ

ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ವಿಚಾರಣೆಯನ್ನ ಸಿಬಿಐ ಇಂದು ಕೂಡ ಚುರುಕುಗೊಳಿಸಿದೆ.

ಫೋನ್ ಟ್ಯಾಪಿಂಗ್ ಪ್ರಕರಣ ವಿಚಾರಣೆ

By

Published : Sep 29, 2019, 3:22 PM IST

ಬೆಂಗಳೂರು :ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ವಿಚಾರಣೆಯನ್ನ ಸಿಬಿಐ ಇಂದು ಕೂಡ ಚುರುಕುಗೊಳಿಸಿದೆ.

ಫೋನ್ ಕದ್ದಾಲಿಕೆ ನಡೆದ ವೇಳೆ ಸಿಸಿಬಿ ಟೆಕ್ನಿಕಲ್ ಸೆಲ್​ನ ಎಸಿಪಿಯಾಗಿದ್ದ ರಾಮಚಂದ್ರಪ್ಪ ಅವರನ್ನ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದು‌ ಎಸಿಪಿ ರಾಮಚಂದ್ರಪ್ಪ ಕುಮಾರ ಕೃಪಾ ಅತಿಥಿ ಗೃಹದಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗಿದ್ದಾರೆ. ಬೆಳಗ್ಗೆಯಿಂದ ವಿಚಾರಣೆ ನಡೆಸಿದ ಸಿಬಿಐ ತಂಡ ಹಲವು ಮಾಹಿತಿ ಕಲೆ ಹಾಕಿ ವಿಚಾರಣೆ ಮುಕ್ತಾಯ ಮಾಡಿದೆ. ಕಳೆದ ಎರಡು ದಿನದಿಂದ ಸಿಬಿಐ ತಂಡ ಮಾಜಿ ಕಮಿಷನರ್ ಅಲೋಕ್ ಕುಮಾರ್ ಅವರ ಮನೆಗೆ ದಾಳಿ ಮಾಡಿ ಪರಿಶೀಲನೆ ನಡೆಸಿ ಅಲೋಕ್‌ಕುಮಾರ್‌ ಅವರನ್ನ ವಿಚಾರಣೆಗೆ ಒಳಪಡಿಸಿತ್ತು. ಸದ್ಯ ಸಿಸಿಬಿ ಟೆಕ್ನಿಕಲ್ ಸೆಲ್​ನಿಂದ ಫೋನ್ ಟ್ಯಾಪಿಂಗ್ ನಡೆದಿರುವ ಕಾರಣ ಆಗ ಇದ್ದ ಇನ್ಸ್​​ಪೆಕ್ಟರ್,ಎಸಿಪಿ ಅಧಿಕಾರಿಗಳ ವಿಚಾರಣೆಯನ್ನ ಸಿಬಿಐ ನಡೆಸುತ್ತಿದೆ.

ಸಿಸಿಬಿ‌ ಟೆಕ್ನಿಕಲ್‌ ಟೀಂ ವಿಚಾರಣೆ ಯಾಕೆ....?
ಅಲೋಕ್ ಕುಮಾರ್ ಅಣತಿಯಂತೆ ಆಡುಗೋಡಿ ಸಿಸಿಬಿ ಟೆಕ್ನಿಕಲ್ ಟೀಂ ಇನ್ಸ್​ಪೆಕ್ಟರ್ ಫೋನ್ ಟ್ಯಾಪಿಂಗ್ ಮಾಡಿ ವಿಶುವಲ್‌ನ ಮಾಜಿ ಕಮಿಷನರ್ ಆಗಿದ್ದ ವೇಳೆ ಅಲೋಕ್‌ಕುಮಾರ್‌ ಅವರಿಗೆ ನೀಡಲಾಗಿತ್ತು. ಹೀಗಾಗಿ ಹಲವು ರಾಜಕಾರಣಿಗಳು ಮಠಾಧೀಶರ ಫೋನ್ ಟ್ಯಾಪ್ ಆಗಿರುವ ಕಾರಣ ತನಿಖೆ ಪ್ರಕರಣದ ಜಾಡು ಹಿಡಿದು ಸಿಬಿಐ ತಂಡ ಹೊರಟಿದೆ.

ABOUT THE AUTHOR

...view details