ಕರ್ನಾಟಕ

karnataka

ETV Bharat / state

ಸಿಬಿಐ ಬಲೆಗೆ ಬಿದ್ದ ಎನ್‌ಹೆಚ್ಐ ಅಧಿಕಾರಿ - ಎನ್ಎಚ್ಐ ಅಧಿಕಾರಿ ಬಂಧಿಸಿದ ಸಿಬಿಐ

ಬೆಂಗಳೂರು, ಕೊಚ್ಚಿ, ಗುರಂಗಾವ್, ಭೂಪಾಲ್ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಸುಮಾರು 4 ಕೋಟಿ‌ ರೂಪಾಯಿ ನಗದು‌ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ‌..

CBI arrested NHI officer
ಸಿಬಿಐ ಬಲೆಗೆ ಬಿದ್ದ ಎನ್ಎಚ್ಐ ಅಧಿಕಾರಿ

By

Published : Dec 31, 2021, 4:24 PM IST

ಬೆಂಗಳೂರು :20 ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪದಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​​​​ಹೆಚ್ಐ)ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸೇರಿದಂತೆ ಐವರನ್ನು ಸಿಬಿಐ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ‌.

ಭೂಪಾಲ್ ಮೂಲದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಎನ್‌ಹೆಚ್ಐ ಅಧಿಕಾರಿ ಅಖಿಲ್ ಅಹಮದ್ ಹಾಗೂ ದೇವೇಂದ್ರ ಜೈನ್,ರತ್ನಾಕರನ್ ಸಾಜಿ ಲಾಲ್, ಸುನೀಲ್ ಕುಮಾರ್ ವರ್ಮಾ ಹಾಗೂ ಅನುಜ್ ಗುಪ್ತಾ ಬಂಧಿತ ಆರೋಪಿಗಳು.

ಇವರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರು, ಕೊಚ್ಚಿ, ಗುರಂಗಾವ್, ಭೂಪಾಲ್ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಸುಮಾರು 4 ಕೋಟಿ‌ ರೂಪಾಯಿ ನಗದು‌ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ‌.

ಇದನ್ನೂ ಓದಿ: ತುಮಕೂರು : ಉದ್ಯಾನವನದಲ್ಲಿ ಹಾಡಹಗಲೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ..

ABOUT THE AUTHOR

...view details