ಬೆಂಗಳೂರು: ಬೆಂಗಳೂರು ಜಲಮಂಡಳಿ ವೆಲ್ಲಾರ ಜಂಕ್ಷನ್ ಬಳಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ (ಶನಿವಾರ) ನಾಳೆ ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ನಗರದ ಕೆಲ ಭಾಗಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರಿಗರೇ ಇಲ್ಕೇಳಿ... ನಾಳೆ ನಗರದ ಕೆಲವೆಡೆ ನೀರು ಪೂರೈಕೆ ಸ್ಥಗಿತ - ಕಾವೇರಿ ನೀರು ಸ್ಥಗಿತ
ಬೆಂಗಳೂರು ಜಲಮಂಡಳಿ ವೆಲ್ಲಾರ ಜಂಕ್ಷನ್ ಬಳಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ನಾಳೆ ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ನಗರದ ಕೆಲ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರಿಗರೇ ಇಲ್ಕೇಳಿ : ದೊಮ್ಮಲೂರು ಸುತ್ತಮುತ್ತ ನಾಳೆ ಕಾವೇರಿ ನೀರು ಸ್ಥಗಿತ
ನಾಳೆ ದೊಮ್ಮಲೂರು ಹಳ್ಳಿ, ದೊಮ್ಮಲೂರು ಬಡಾವಣೆ, ಅಮರಜ್ಯೋತಿ ಬಡಾವಣೆ, ಹೆಚ್ ಎಎಲ್ ಎರಡನೇ ಹಂತ, ಕೋಡಿಹಳ್ಳಿ, ಈಜೀಪುರ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.