ಕರ್ನಾಟಕ

karnataka

ETV Bharat / state

ಪೊಲೀಸ್ ಕಮೀಷನರ್ ನೇಮಕಕ್ಕೆ ತಡೆ ನೀಡಲು‌ ನಕಾರ: ಆ.14ಕ್ಕೆ ವಿಚಾರಣೆ‌ ಮುಂದೂಡಿದ CAT - ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ

ಕಮೀಷನರ್ ಆದೇಶ ರದ್ದು ಕೋರಿ ಹಿಂದಿನ‌‌ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು.‌ ಆದ್ರೆ ಈ ಅರ್ಜಿಗೆ ತಡೆ ನೀಡಲು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ನಿರಾಕರಿಸಿದೆ.

ಸಿಎಟಿ

By

Published : Aug 5, 2019, 3:32 PM IST

ಬೆಂಗಳೂರು: ಹಿರಿತನ ಆಧಾರದ ಮೇಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇಮಕ ಮಾಡಿರುವ ಸರ್ಕಾರ ಆದೇಶ ವಿರೋಧಿಸಿ ಸಲ್ಲಿಸಿದ್ದ ಅರ್ಜಿ‌ಗೆ ತಡೆ ನೀಡಲು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ನಿರಾಕರಿಸಿದೆ.

ಕಮೀಷನರ್ ಆದೇಶ ರದ್ದು ಕೋರಿ ಹಿಂದಿನ‌‌ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು.‌ ಪೊಲೀಸ್ ಕಮೀಷನರ್ ಆಗಿ 44 ದಿನಗಳ ಕಾಲ ಸೇವೆ ಸಲ್ಲಿಸಿದ್ದು, ನಿಯಮಾನುಸಾರ ಬಲವಾದ ಕಾರಣವಿಲ್ಲದೇ ವರ್ಗಾವಣೆ ಮಾಡಕೂಡದು. ಹೀಗಾಗಿ ಕಮೀಷನರ್ ನೇಮಕ ವಿಚಾರದಲ್ಲಿ‌ ಸರ್ಕಾರದ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅಲೋಕ್ ಕುಮಾರ್ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸಿಎಟಿ ಭಾಸ್ಕರ್ ರಾವ್ ಅವರ ನೇಮಕಾತಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಕಮೀಷನರ್ ಭಾಸ್ಕರ್ ರಾವ್​​ಗೆ ಆಕ್ಷೇಪಣೆಗಳಿದ್ದರೆ ಅರ್ಜಿ ಸಲ್ಲಿಸಲು ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಆ.14ಕ್ಕೆ ಮುಂದೂಡಿದೆ.

ABOUT THE AUTHOR

...view details