ಕರ್ನಾಟಕ

karnataka

ETV Bharat / state

ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ .. ಒಂದೇ ದಿನಕ್ಕೆ 28 ಬೈಕ್‌ ಜಪ್ತಿ - ಬೆಂಗಳೂರಿನಲ್ಲಿ ಬೈಕ್​ ವ್ಹೀಲಿಂಗ್​ ಲೇಟೆಸ್ಟ್​ ನ್ಯೂಸ್​

ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಫ್ಯಾಷನ್‌ಗಾಗಿ ಎಲ್ಲೆಂದರಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿತ್ತು. ಅಲ್ಲದೆ ವಾಹನ ಸವಾರರಿಂದಲೂ ವ್ಯಾಪಕ ದೂರು ಕೇಳಿ ಬಂದಿದ್ದವು..

case registered against byke wheeling riders
28 ಬೈಕ್ ಗಳು ಜಪ್ತಿ

By

Published : Aug 31, 2020, 9:33 PM IST

ಬೆಂಗಳೂರು :ನಗರದಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ ಒಂದೇ‌ ದಿನ 17 ಪ್ರಕರಣ ದಾಖಲಿಸಿ, 28 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಪೊಲೀಸರಿಂದ 28 ಬೈಕ್‌ಗಳು ಜಪ್ತಿ

ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಫ್ಯಾಷನ್‌ಗಾಗಿ ಎಲ್ಲೆಂದರಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿತ್ತು. ಅಲ್ಲದೆ ವಾಹನ ಸವಾರರಿಂದಲೂ ವ್ಯಾಪಕ ದೂರು ಕೇಳಿ ಬಂದಿದ್ದವು. ‌ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಂಚಾರಿ ಪೊಲೀಸರು 17 ಪ್ರಕರಣ ದಾಖಲಿಸಿಕೊಂಡು, 28 ಬೈಕ್ ಜಪ್ತಿ ಮಾಡಿ 31 ಬೈಕ್ ಸವಾರರನ್ನು ಬಂಧಿಸಿದ್ದಾರೆ.

ಬಂಧಿತ ಬೈಕ್ ಸವಾರರ ಪರವಾನಗಿ ಅಮಾನತಿಗಾಗಿ ಆರ್​​ಟಿಒಗೆ ಮಾಹಿತಿ ಕಳುಹಿಸಲಾಗಿದೆ. ಇನ್ನೊಂದೆಡೆ ಪೋಷಕರನ್ನು ಕರೆಸಿ ಮಕ್ಕಳಿಗೆ ಬುದ್ಧಿವಾದ ಹೇಳುವಂತೆ ತಿಳಿಸಿದ್ದು, ಮುಂದಿನ ಬಾರಿ ಇಂತಹ ದುಸ್ಸಾಹಕ್ಕೆ ಕೈ ಹಾಕಬಾರದೆಂದು ಎಚ್ಚರಿಕೆ ಕೊಟ್ಟು ಕಳುಹಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details