ಬೆಂಗಳೂರು: ರೈತರು, ಕನ್ನಡ ಪರ ಸಂಘಟನೆಗಳ ಮೇಲೆ ಸುಮ್ಮನೆ ಹಿಂದಿನ ಸರ್ಕಾರ ಕೇಸ್ ಹಾಕಿದೆ. ಅದನ್ನು ಹಿಂಪಡೆಯುವಂತೆ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋಟಾ ಶ್ರೀನಿವಾಸ್ ಪೂಜಾರಿ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶ್ರೀನಿವಾಸ್ ಪೂಜಾರಿ ಪತ್ರ ಕೊಟ್ಟಿದ್ದಾರೆ. ಸಿಎಂ ಜೊತೆ ಚರ್ಚಿಸುತ್ತೇನೆ. ಪ್ರಕರಣ ವಾಪಸ್ ಪಡೆಯಲು ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಪೋಸ್ಟ್ ಖಾಲಿ ಇದೆ, ಬೇಡಿಕೆ ಇಟ್ಟಿದ್ದಾರೆ:ಅಪ್ಪಚ್ಚು ರಂಜನ್ ಸಚಿವ ಸ್ಥಾನ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗೊಂದಲ ಏನಿಲ್ಲ. ಪೋಸ್ಟ್ ಖಾಲಿ ಇದೆ. ಅದಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರು ಕೂಡ ಹಿರಿಯರಿದ್ದಾರೆ ಎಂದರು.
ನೋವಿನಲ್ಲಿ ಈಶ್ವರಪ್ಪ ಆ....ಮಾತು ಹೇಳಿದ್ದಾರೆ:ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದವರು, ಸಂಘಟನೆಯವರ ಕಗ್ಗೊಲೆಯಾಗಿದೆ. ಆ ನೋವಿನ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಅದನ್ನು ಉದ್ದ ಮಾಡೋದು ಬೇಡ ಎಂದು ಸಮರ್ಥಿಸಿಕೊಂಡರು.