ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿರುವ ಶಂಕಿತರಿಗೂ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆರೋಪಿಗಳಿಗೂ ಸಾಮ್ಯತೆ ಕಂಡು ಬರದ ಕಾರಣ ಕೃತ್ಯ ಎಸಗಿದ ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪ್ರಕರಣ ಬೇಧಿಸಲು ರಚಿಸಲಾಗಿರುವ ಐದು ವಿಶೇಷ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ನಿನ್ನೆ ಇಬ್ಬರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದವು. ವಿಚಾರಣೆ ಸಂದರ್ಭದಲ್ಲಿ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿಗಳಿಗೂ ವಶಕ್ಕೆ ಪಡೆದುಕೊಂಡಿರುವ ಶಂಕಿತನ ಬಾಡಿ ಲಾಂಗ್ವೇಜ್ ಹೋಲಿಕೆಯಾಗುತ್ತಿಲ್ಲ. ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರ ಲಭ್ಯವಾಗದ ಕಾರಣ ನಿಜವಾದ ಆರೋಪಿಗಳ ಪತ್ತೆಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
ವಾಹನ ಕಳ್ಳತನ ಮಾಡಿದ್ದ ಆರೋಪಿಗಳು
ತಡರಾತ್ರಿ ಸತೀಶ್ ರೆಡ್ಡಿ ಮನೆಗೆ ನುಗ್ಗಿ ಎರಡು ಕಾರುಗಳಿಗೆ ಬೆಂಕಿಯಿಟ್ಟ ಬಳಿಕ ತಲೆಮರೆಸಿಕೊಳ್ಳಲು ದುಷ್ಕರ್ಮಿಗಳು ಬಹಳ ಹೊತ್ತು ಅದೇ ಏರಿಯಾದಲ್ಲಿ ವಾಹನ ಕಳ್ಳತನಕ್ಕೂ ಯತ್ನಿಸಿದ್ದಾರೆ. ಠಾಣಾ ವ್ಯಾಪ್ತಿಯೊಂದರಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಆಟೋ ಕಳ್ಳತನಕ್ಕೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ನಿರಂತರ ಪ್ರಯತ್ನದ ಬಳಿಕ ಒಂದು ಬಜಾಜ್ ಪ್ಲಾಟಿನಂ ಬೈಕ್ ಹ್ಯಾಂಡಲ್ ಮುರಿದು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ.
ಇದಕ್ಕೂ ಮುನ್ನ ಮೂವರು ಆರೋಪಿಗಳು ಒಂದರಿಂದ ಎರಡು ಗಂಟೆಗಳ ಕಾಲ ಏರಿಯಾ ಸುತ್ತಮುತ್ತ ಓಡಾಡಿದ್ದಾರೆ. ಮುಖ ಚಹರೆ ಗೊತ್ತಾಗದಿರಲು ದಾರಿ ಮಧ್ಯೆ ಚಪ್ಪಲಿ ಮತ್ತು ಬಟ್ಟೆ ಬದಲಾಯಿಸಿದ್ದಾರೆ. ಸುಮಾರು ಏಳರಿಂದ ಎಂಟು ಮನೆಗಳ ಮೇಲೆ ಹತ್ತಿ ಓಡಾಡಿದ್ದಾರೆ. ಕೆಲಹೊತ್ತು ಅಲ್ಲೇ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಕದ್ದ ಬೈಕ್ ಮುಖಾಂತರ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಳಿಕ ಎಚ್ಚೆತ್ತ ಸತೀಶ್ ರೆಡ್ಡಿ