ಬೆಂಗಳೂರು: ಪುಟ್ಟೇನಹಳ್ಳಿ ಬಳಿ ಮೂರು ಅಂತಸ್ತಿನ ಕಟ್ಟಡದ ನೆಲಮಹಡಿ ಕುಸಿತ ಪ್ರಕರಣ ಸಂಬಂಧ ಕಟ್ಟಡದ ಮಾಲೀಕ ಗೌತಮ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಕುಸಿತ ಪ್ರಕರಣ...ಮಾಲೀಕನ ವಿರುದ್ಧ ಎಫ್ಐಆರ್ - bangalore news
ಪುಟ್ಟೇನಹಳ್ಳಿ ಬಳಿ ಮೂರು ಅಂತಸ್ತಿನ ಕಟ್ಟಡದ ನೆಲಮಹಡಿ ಕುಸಿತ ಪ್ರಕರಣ ಸಂಬಂಧ ಕಟ್ಟಡದ ಮಾಲೀಕ ಗೌತಮ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಸಂಜೆ 6.30ರ ಸುಮಾರಿಗೆ ಪುಟ್ಟೇನಹಳ್ಳಿಯ ವಿವೇಕ ನಗರ ಬಳಿ ಮೂರು ಅಂತಸ್ತಿನ ಕಟ್ಟಡದ ನೆಲ ಅಂತಸ್ತು ಕುಸಿದು ಓರ್ವ ಮಹಿಳೆ ಗಾಯಗೊಂಡಿದ್ದರು. 30 ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, ಕೆಲ ವರ್ಷಗಳ ಹಿಂದೆಯೇ ಗೋಡೆಯಲ್ಲಿ ಬಿರುಕು ಬಿಟ್ಟಿತ್ತು. ಹೀಗಿದ್ದರೂ ಮಾಲೀಕ ಗೌತಮ್ ಕಟ್ಟಡ ಮೊದಲ ಹಾಗೂ ಎರಡನೇ ಮಹಡಿಯಲ್ಲಿ ನೆಲೆಸಿದ್ದ ಬಾಡಿಗೆದಾರರನ್ನು ಬಾಡಿಗೆ ಹಣಕ್ಕಾಗಿ ಖಾಲಿ ಮಾಡಿಸಿಲಿರಲಿಲ್ಲ.
ಮಾಲೀಕನ ನಿರ್ಲಕ್ಷ್ಯದ ಪರಿಣಾಮ, ಕಟ್ಟಡದ ನೆಲ ಅಂತಸ್ತು ಕುಸಿದಿತ್ತು. ಘಟನೆ ಸಂಬಂಧ ನಾಪತ್ತೆಯಾಗಿರುವ ಕಟ್ಟಡದ ಮಾಲೀಕ ಗೌತಮ್ ವಿರುದ್ಧ ನಿರ್ಲಕ್ಷ್ಯ ತೋರಿದ ಪ್ರಕರಣ ದಾಖಲಿಸಿಕೊಂಡು ಪುಟ್ಟೇನ ಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.