ಬೆಂಗಳೂರು :ನಗರದಲ್ಲಿ ಕೊರೊನಾ ಸೇಂಕಿತರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೈದ್ಯರ ಕೊರತೆಯಿದೆ, ಆ್ಯಂಬುಲೆನ್ಸ್ ಇಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಪ್ರತೀ ದಿನ ವರದಿಯಾಗುತ್ತಲೇ ಇವೆ. ಈ ಮಧ್ಯೆ ವಿಕ್ಟೋರಿಯ ಆಸ್ಪತ್ರೆಯದ್ದು ಎನ್ನಲಾದ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು.
ಮಾಸ್ಕ್ ಹಾಕಿಕೊಂಡಿರುವ ನೂರಾರು ಜನರು ಗುಂಪು ಸೇರಿರುವ ವಿಡಿಯೋ ಒಂದನ್ನು ಯಾರೋ ಕಿಡಿಗೇಡಿಗಳು ವಿಕ್ಟೋರಿಯ ಆಸ್ಪತ್ರೆಯದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.