ಕರ್ನಾಟಕ

karnataka

ETV Bharat / state

ಎಚ್ಚೆತ್ತ ಸೈಬರ್ ಪೊಲೀಸರು: 35 ಅನಧಿಕೃತ ಲೋನ್​ ಆ್ಯಪ್​ಗಳ ವಿರುದ್ಧ 9 ಎಫ್ಐಆರ್ ದಾಖಲು - Case against Unauthorized Loan App

ಚೀನಾ ಲೋನ್​ ಆ್ಯಪ್​ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಆ್ಯಪ್​ಗಳ ವಿರುದ್ಧ ಪ್ರಕರಣ ದಾಖಲಾಗಿದೆ.

cyber cops
ಸೈಬರ್ ಪೊಲೀಸರು

By

Published : Mar 6, 2022, 7:06 PM IST

ಬೆಂಗಳೂರು:ಅನಧಿಕೃತ ಲೋನ್ ಆ್ಯಪ್​ಗಳ ವಿರುದ್ಧ ನಗರದ ಸೈಬರ್​ ಕ್ರೈಂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಆನ್​ಲೈನ್​ ಲೋನ್​ಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದ 35 ಆ್ಯಪ್​ಗಳ ವಿರುದ್ಧ ಪೊಲೀಸರು ಒಂದೇ ಬಾರಿ 9 ಎಫ್.ಐ.ಆರ್​ಗಳನ್ನು ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಲೋನ್​ ಆ್ಯಪ್​ಗಳು ಅಲ್ಪಾವಧಿಗೆ ಹೆಚ್ಚಿನ ಬಡ್ಡಿಗೆ ಸಾಲದ ಆಮಿಷವೊಡ್ಡುತ್ತವೆ. ಪ್ರೊಸೆಸಿಂಗ್​ ಚಾರ್ಜ್​ ಹೆಸರಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರು ಸೇರಿ ದೇಶಾದ್ಯಂತ ಇನ್​​ಸ್ಟಂಟ್​ ಲೋನ್ ಹೆಸರಿನಲ್ಲಿ ಕಿರುಕುಳ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೀನಾ ಲೋನ್​ ಆ್ಯಪ್​ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಆ್ಯಪ್​ಗಳ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಮಿಷನರ್ ಕಮಲ್ ಪಂತ್ ನೇತೃತ್ವದಲ್ಲಿ ತನಿಖೆ:ಈ ಕುರಿತು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಹಾಗೂ ಸಿಸಿಬಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಓದಿ:ಹುಬ್ಬಳ್ಳಿಯಲ್ಲಿ ನ್ಯಾಯವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಸಿಎಂ.. ಪೊಲೀಸ್​ ತನಿಖಾ ಕಾರ್ಯಕ್ಕೆ ವೇಗ

For All Latest Updates

ABOUT THE AUTHOR

...view details