ಬೆಂಗಳೂರು:ವಯೋಮಿತಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸಲ್ಲಿಸಿ ವಂಚಿಸಿರುವ ಆರೋಪದಡಿ ಅರ್ಜುನ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬ್ಯಾಡ್ಮಿಂಟನ್ ಅಕಾಡೆಮಿಯೊಂದರ ಮಾಲೀಕ ನಾಗರಾಜ್ ಎಂಬುವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. '1998ರಲ್ಲಿ ಜನಿಸಿರುವ ಲಕ್ಷ್ಯ ಸೇನ್ ಸರ್ಕಾರ ಹಾಗೂ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಸೌಲಭ್ಯಗಳನ್ನು ಪಡೆಯುವ ದುರುದ್ದೇಶದಿಂದ 2001ರಲ್ಲಿ ಜನಿಸಿರುವಂತೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ' ದೂರಿನಲ್ಲಿ ಎಂದು ಆರೋಪಿಸಲಾಗಿದೆ.