ಬೆಂಗಳೂರು: ಕೆಲಸ ಮುಗಿಸಿಕೊಂಡು ನಿನ್ನೆ ರಾತ್ರಿ ಕಾರ್ಪೆಂಟರ್ ಬೈಕ್‌ನಲ್ಲಿ ಬರುವಾಗ ಹಂತಕರು ಅಡ್ಡಗಟ್ಟಿ ಕುತ್ತಿಗೆ ಕೊಯ್ದು ಪರಾರಿಯಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬಳಿ ಜರುಗಿದೆ. ದಿನೇಶ್ ಹತ್ಯೆಯಾಗಿರುವ ದುದೈರ್ವಿ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧಕಾರ್ಯ ಚುರುಕುಗೊಳಿಸಿದ್ದಾರೆ. ಹತ್ಯೆಗೆ ಒಳಗಾದ ದಿನೇಶ್ ನೈಸ್ ರಸ್ತೆ ಸಂಪರ್ಕಿಸುವ ಮಂಗನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಮೂಲತಃ ಆಂಧ್ರದವರು. ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ: ಹೆಂಡ್ತಿ - ಮಕ್ಕಳೊಂದಿಗೆ ವಾಸವಾಗಿದ್ದ ದಿನೇಶ್ ತಾನಾಯಿತು - ತನ್ನ ಕೆಲಸವಾಯಿತು ಅಂದುಕೊಂಡು ಜೀವನ ನಡೆಸುತ್ತಿದ್ದರು. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುತ್ತಿದ್ದಾಗ, ಅಪರಿಚಿತರು ಅಡ್ಡಗಟ್ಟಿ ಮಾರಕಾಸ್ತ್ರ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಶ್ವಾನದಳದಿಂದ ಪರಿಶೀಲನೆ:ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಎಫ್ ಎಸ್ ಎಲ್ ಹಾಗೂ ಶ್ವಾನದಳವನ್ನ ಕರೆಯಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ದಿನೇಶ್ ನನ್ನು ಕೊಲೆ ಯಾಕಾಗಿ ಹಾಗೂ ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಯಾರ ಸಹವಾಹಸಕ್ಕೂ ಹೋಗದ ಸ್ವಭಾವದವನು. ಆತನನ್ನು ದುಷ್ಕರ್ಮಿಗಳು ಯಾಕೆ ಕೊಲೆ ಮಾಡಿದ್ದಾರೆ ಎಂಬುದನ್ನು ನಂಬಲು ಆಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂಓದಿ:1 ರೂಪಾಯಿ ಚಿಲ್ಲರೆ ನೀಡದ ಕಂಡಕ್ಟರ್: ಪ್ರಯಾಣಿಕನಿಗೆ ₹3 ಸಾವಿರ ಪರಿಹಾರ ನೀಡಲು ಬಿಎಂಟಿಸಿಗೆ ಕೋರ್ಟ್ ಆದೇಶ