ಕರ್ನಾಟಕ

karnataka

ETV Bharat / state

ಸರಕು ವಿಮಾನ ದರ ಏರಿಕೆ: ವಿದೇಶಕ್ಕೆ ರಫ್ತಾಗದೆ ಉಳಿದ ಹಣ್ಣು, ತರಕಾರಿ - fruit and vegetables not exported abroad

ಸರಕು ವಿಮಾಗಳಿಗೆ ರೈತರ ಹಣ್ಣು, ತರಕಾರಿ ಮತ್ತು ವೈದ್ಯಕೀಯ ಉಪಕರಣಗಳ ಸರಕುಗಳನ್ನು ಆಯ್ದ ದೇಶಿ ಹಾಗೂ ಅಂತಾರಾಷ್ಟ್ರೀಯ ರಫ್ತಿಗೆ ಅನುಮತಿ ನೀಡಲಾಗಿದೆ. ಆದರೆ, ವಿಮಾನ ಹಾರಾಟ ದರ ವ್ಯಾಪಕವಾಗಿ ಹೆಚ್ಚಿದ್ದರಿಂದ ಬೆಳೆಗಾರರ ಸರಕುಗಳು ರಫ್ತಾಗದೆ ಉಳಿಯುತ್ತಿವೆ. ಈ ಬಗ್ಗೆ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ರಫ್ತುದಾರರು, ಉದ್ಯಮಿ ಒಕ್ಕೂಟಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅಧಿಕಾರಿಗಳ ಜೊತೆ ಸಭೆ
ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅಧಿಕಾರಿಗಳ ಜೊತೆ ಸಭೆ

By

Published : Apr 20, 2020, 8:49 PM IST

ಬೆಂಗಳೂರು: ಲಾಕ್​ಡೌನ್​ನಿಂದ ಬಹುತೇಕ ಉದ್ಯಮಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ನಡುವೆ ವಿಮಾನಯಾನ ಸಾರಿಗೆಯ ಸರಕು ವಿಮಾಗಳ ಹಾರಾಟಕ್ಕೆ ಷರತ್ತುಬದ್ಧ ಅವಕಾಶ ನೀಡಲಾಗಿದೆ.

ಸರಕು ವಿಮಾಗಳಿಗೆ ರೈತರ ಹಣ್ಣು, ತರಕಾರಿ ಮತ್ತು ವೈದ್ಯಕೀಯ ಉಪಕರಣಗಳ ಸರಕುಗಳನ್ನು ಆಯ್ದ ದೇಶಿ ಹಾಗೂ ಅಂತಾರಾಷ್ಟ್ರೀಯ ರಫ್ತಿಗೆ ಅನುಮತಿ ನೀಡಲಾಗಿದೆ. ಆದರೆ, ವಿಮಾನ ಹಾರಾಟ ದರ ವ್ಯಾಪಕವಾಗಿ ಹೆಚ್ಚಿದ್ದರಿಂದ ಬೆಳೆಗಾರರ ಸರಕುಗಳು ರಫ್ತಾಗದೆ ಉಳಿದಿವೆ.

ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅವರು ರಫ್ತುದಾರರು ಹಾಗೂ ವಿವಿಧ ಉದ್ಯಮಿ ಒಕ್ಕೂಟ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅಧಿಕಾರಿಗಳ ಜೊತೆ ಸಭೆ

ವಿಕಾಸಸೌಧದಲ್ಲಿ ಸಭೆ ನಡೆಸಿ ಅಧಿಕಾರಿಗಳ ಜತೆ ಚರ್ಚಿಸಿದರು. ಕೋವಿಡ್ -19 ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಹಣ್ಣು- ತರಕಾರಿ ವಿದೇಶಕ್ಕೆ ರಫ್ತು ಮಾಡಲು ಕಷ್ಟವಾಗುತ್ತಿದೆ. ಈ ಹಿಂದೆ ನಿತ್ಯ ಸಾವಿರಾರು ವಿಮಾನಗಳು ವಿದೇಶಕ್ಕೆ ಹೋಗಿ- ಬರುತ್ತಿದ್ದರಿಂದ, ವಹಿವಾಟಿನ ಸರಪಳಿ ಸರಳವಾಗಿ ನಡೆಯುತ್ತಿತ್ತು. ಈಗ ಕೊರೊನಾದಿಂದಾಗಿ ವಿಮಾನ ಸಂಚಾರ ಸ್ಥಗಿತವಾಗಿದೆ.

ವಿದೇಶಗಳಿಂದಲೂ ಯಾವುದೇ ವಸ್ತುಗಳು ಆಮದು ಆಗುತ್ತಿಲ್ಲ. ಹಣ್ಣು, ತರಕಾರಿ ಹೊತ್ತೊಯ್ದ ಸರಕು ವಿಮಾಗಳು ವಾಪಸ್ ಬರುವಾಗ ಖಾಲಿಯಾಗಿ ಬರುತ್ತಿವೆ. ಇದರಿಂದಾಗಿ ವಿಮಾನ ದರ ಮೂರ- ನಾಲ್ಕುಪಟ್ಟು ಏರಿಕೆ ಆಗಿದೆ. ರಫ್ತುದಾರರು ವಿದೇಶಗಳಿಗೆ ಹಣ್ಣು, ತರಕಾರಿ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರು ಚರ್ಚೆ ನಡೆಸಿದ್ದು ಪರ್ಯಾಯ ಮಾರ್ಗ ಸಿಗಬಹುದೆ ಎಂಬ ನಿರೀಕ್ಷೆ ಇದೆ.

ಈ ಹಿಂದಿ ವಿಧಿಸಲಾಗುತ್ತಿದ್ದ ಕಾರ್ಗೋ ದರ ಪಟ್ಟಿ ನೀಡುವಂತೆ ಸಚಿವರು ಕೋರಿದರು. ಸಾಗಾಟಕ್ಕೆ ರಾಜ್ಯದ ತರಕಾರಿ ಮತ್ತು ಹಣ್ಣುಗಳಿಗೆ ಮೊದಲು ಆದ್ಯತೆ ನೀಡಬೇಕು. ಹಲವು ಬಾರಿ ಸ್ಥಳೀಯ ಬುಕ್ಕಿಂಗ್ ರದ್ದು ಮಾಡಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ರಫ್ತುದಾರರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಈ ಬಗ್ಗೆ ಸರಕು ವಿಮಾನ ಸೇವೆ ಒದಗಿಸುವವರಿಗೆ ಸೂಚನೆ ನೀಡಬೇಕು ಎಂದರು.

ಸಚಿವ ಡಾ. ನಾರಾಯಣ ಗೌಡ ಅವರು ಅಧಿಕಾರಿಗಳು, ರಫ್ತು ಹಾಗೂ ಉದ್ಯಮಿ ಒಕ್ಕೂಟಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು

ರಫ್ತಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು. ಎರಡು ದಿನಗಳ ಒಳಗೆ ರಫ್ತು ಮಾಡಲು ಇರುವ ಸಮಸ್ಯೆಗಳ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ABOUT THE AUTHOR

...view details