ಕರ್ನಾಟಕ

karnataka

ETV Bharat / state

ತಡರಾತ್ರಿ ಕಾರಿನಲ್ಲಿ ಯುವಕರ ಮೋಜು-ಮಸ್ತಿ: ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರಿಂದ ಕ್ರಮ

ಸದಾಶಿವನಗರದ ಸಂಚಾರ ಪೊಲೀಸರು ಸಿಸಿಟಿವಿ ವಿಡಿಯೋವನ್ನು ಆಧರಿಸಿ ಯುವಕರ ಕಾರು ಪತ್ತೆ ಮಾಡಲು ಮುಂದಾಗಿದ್ದರು. ವಾಹನ ಯಾರಿಗೆ ಸೇರಿದ್ದು?, ಎಷ್ಟು ಜನ ಪ್ರಯಾಣಿಸುತ್ತಿದ್ದರು?, ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದರು ಎಂದು ತನಿಖೆ ನಡೆಸಿದ್ದರು.

car-seized-by-police-for-violating-the-rules-in-bangalore
ತಡರಾತ್ರಿ ಕಾರಿನಲ್ಲಿ ಮೋಜು-ಮಸ್ತಿ ಮಾಡಿದ ಯುವಕರು

By

Published : Sep 12, 2021, 5:09 PM IST

ಬೆಂಗಳೂರು: ಸದಾಶಿವನಗರದಲ್ಲಿ ಶನಿವಾರ ತಡರಾತ್ರಿ ಐಷಾರಾಮಿ ಕಾರಿನಲ್ಲಿ ಬಂದ ಯುವಕರು ಮೋಜು-ಮಸ್ತಿ ಮಾಡಿರುವ ದೃಶ್ಯ ವೈರಲ್ ಆಗಿತ್ತು. ಇದೀಗ ಆ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಡರಾತ್ರಿ ಕಾರಿನಲ್ಲಿ ಯುವಕರ ಮೋಜು-ಮಸ್ತಿ- ಸಿಸಿಟಿವಿ ವಿಡಿಯೋ

ಎನ್.ಡಿ.ಎಂ.ಎ ಆ್ಯಕ್ಟ್ ಅಡಿ ಪ್ರಕರಣ: ನೈಟ್ ಕರ್ಫ್ಯೂ ಮಧ್ಯೆಯೂ ಸುತ್ತಾಟ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಎನ್.ಡಿ.ಎಂ.ಎ ಆ್ಯಕ್ಟ್ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಾರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಆನ್​ಡ್ಯೂಟಿ ಎಸ್ಸೆನ್ಷಿಯಲ್ ಸರ್ವಿಸ್:ಯುವಕರುಆನ್​ಡ್ಯೂಟಿ ಎಸ್ಸೆನ್ಷಿಯಲ್ ಸರ್ವಿಸ್ ಎಂದು ಕಾರಿನ ಮೇಲೆ ಬೋರ್ಡ್ ಹಾಕಿದ್ದರು. ಎಲೆಕ್ಟ್ರಿಕ್ ಕಂಪನಿ ಸ್ಟಾಫ್ ಎಂದು ಹೇಳಿಕೊಂಡು ಸುತ್ತಾಟ ನಡೆಸುತ್ತಿದ್ದರು. ವಾಹನದ ಹಿಂಭಾಗ ಸೋಹಮ್ ರಿನವೆಬಲ್ ಎನೆರ್ಜಿ ಪ್ರೈ‌.ಲಿ ಕಂಪನಿ ಹೆಸರು ಹಾಕಿಕೊಂಡಿದ್ದರು. ಹೀಗಾಗಿ, ಕಾಯ್ದೆಯಡಿ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡನ ವಿರುದ್ಧ ಮಹಿಳೆಯಿಂದ ಪೊಲೀಸರಿಗೆ ದೂರು

ABOUT THE AUTHOR

...view details