ಬೆಂಗಳೂರು :ರಾಜಧಾನಿಯಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣ ಮರುಕಳಿಸುತ್ತಲೇ ಇವೆ. ಶ್ವಾನ ಲಾರಾ ಪ್ರಕರಣದ ಬೆನ್ನಲ್ಲೇ ಜಯನಗರದ 9ನೇ ಬ್ಲಾಕ್‌ನಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದೆ. ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿಕೊಂಡು ಹೋಗಿರುವ ಘಟನೆ ನಡೆದಿದೆ.
ಮೇ 27ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಏಕಾಏಕಿ ಬಂದ ಕಾರು ನಾಯಿಯ ಕತ್ತಿನ ಮೇಲೆ ಹತ್ತಿಸಿದ ಪರಿಣಾಮ ಸ್ಥಳದಲ್ಲೇ ನರಳಾಡಿ ಕೆಲ ಸೆಕೆಂಡ್ಗಳಲ್ಲೇ ಸಾವನ್ನಪ್ಪಿದೆ.
ಪ್ರಕರಣದ ಕುರಿತು ಶ್ವಾನಪ್ರಿಯರಾದ ನಾಗರಾಜ್ ಹಾಗೂ ಬದ್ರಿಪ್ರಸಾದ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಕಾರು ಹತ್ತಿಸಿ ದುಷ್ಕೃತ್ಯ ಮೆರೆದಿರೋದು ಯಾರೆಂದು ತಿಳಿದು ಬಂದಿಲ್ಲ.