ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ನಿರ್ಮಾಣ ಹಂತದ​​ ಕಟ್ಟಡ ಕುಸಿತ: ಇಬ್ಬರು ಸಾವು, 12 ಜನರಿಗೆ ಗಾಯ - undefined

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಕಾರು ಪಾರ್ಕಿಂಗ್ ಕಟ್ಟಡ ಕುಸಿತ

By

Published : Apr 5, 2019, 8:51 AM IST

Updated : Apr 5, 2019, 4:25 PM IST

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಸಾವಿಗೀಡಾಗಿದ್ದು, 12 ಜನ ಗಾಯಗೊಂಡಿರೋ ಘಟನೆ ಯಶವಂತಪುರದ ಆರ್​ಎಂಸಿ ಯಾರ್ಡ್ ಬಳಿ ನಡೆದಿದೆ.

ಬೆಳಗಿನ ಜಾವ 4:40ರ ವೇಳೆಗೆ ಘಟನೆ ನಡೆದಿದ್ದು, ಕಟ್ಟಡದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ರಾಹುಲ್ ಹಾಗೂ ಬಿಹಾರ ಮೂಲದ ರಾಕೇಶ್ ಎಂಬುವರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 12 ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತದೇಹಗಳನ್ನ ಕೆ.ಸಿ ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಆರ್​ಎಂಸಿ ಯಾರ್ಡ್ ಪೊಲೀಸರು ಭೇಟಿ ಕೊಟ್ಟು ಸ್ಥಳದ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನೂ ಕೂಡ ಕೆಲವರು ಕಟ್ಟಡದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಆರ್​ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲೀಕರ ಬಗ್ಗೆ ತನಿಖೆ ಮುಂದುವರೆದಿದೆ.

ಬೆಂಗಳೂರಲ್ಲಿ ನಿರ್ಮಾಣ ಹಂತದ​​ ಕಟ್ಟಡ ಕುಸಿತ

ಗಾಯಾಳುಗಳು :
ಒಂಪ್ರಕಾಶ್ (21) ಬಿಹಾರ, ದೇವರಾಜು (21) ಯಾದಗಿರಿ, ಹನುಮಂತ (21) ಯಾದಗಿರಿ, ಮಲ್ಲಿಕಾರ್ಜುನ (20) ಯಾದಗಿರಿ, ದೊಡ್ಡಪ್ಪ (21) ಯಾದಗಿರಿ, ಸಿದ್ದಪ್ಪ (23) ಯಾದಗಿರಿ, ಗಿರಿಜ್ (35) ಪಶ್ಚಿಮ ಬಂಗಾಳ, ಬ್ದುಲ್ ಹಮೀದ್ ಶೇಖ್ (40) ಪಶ್ಚಿಮ ಬಂಗಾಳ, ಚೋಟು ಬುಯ್ಯ (24) ಪಶ್ಚಿಮ ಬಂಗಾಳ, ಶಾಮ್ ಗೋಸ್ವಾಮಿ (40) ಪಶ್ಚಿಮ ಬಂಗಾಳ, ನಿಯಾಜುಲ್ ಶೇಕ್ (30) ಪಶ್ಚಿಮ ಬಂಗಾಳ, ನಾಸಿರ್ ಶೇಕ್ (32) ಪಶ್ಚಿಮ ಬಂಗಾಳ.

ಮೃತರು:
ಪಶ್ಚಿಮ ಬಂಗಾಳ ಮೂಲದ ರಾಹುಲ್ ಗೋಸ್ವಾಮಿ, ಬಿಹಾರ ಮೂಲದ ರಾಕೇಶ್ ಮೃತ ದುರ್ದೈವಿಗಳು.

Last Updated : Apr 5, 2019, 4:25 PM IST

For All Latest Updates

TAGGED:

ABOUT THE AUTHOR

...view details