ಕರ್ನಾಟಕ

karnataka

ETV Bharat / state

ಡ್ರೈವಿಂಗ್​ ವೇಳೆ ಚಾಲಕನಿಗೆ ತಲೆ ಸುತ್ತು : ವಿಧಾನಸೌಧ ಮುಂಭಾಗದ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು - ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು

ವಿಧಾನಸೌಧ ಬಳಿ ಕಾರು ಚಾಲನೆ ಮಾಡಿಕೊಂಡು ಬರುವಾಗ ಚಾಲಕನಿಗೆ ತಲೆ ಸುತ್ತು ಬಂದ ಕಾರಣ, ಆತನ ನಿಯಂತ್ರಣ ತಪ್ಪಿ ವಿಧಾನಸೌಧ ಮುಂಭಾಗ ರಸ್ತೆಯ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ.

ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು
ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು

By

Published : Nov 22, 2021, 4:49 PM IST

ಬೆಂಗಳೂರು :ಚಾಲಕನ ನಿಯಂತ್ರಣ ತಪ್ಪಿ ವಿಧಾನಸೌಧ ಮುಂಭಾಗ ರಸ್ತೆಯ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು

ವಿಧಾನಸೌಧದ ಬಳಿ ಐ-10 ಕಾರು ಚಾಲನೆ ಮಾಡಿಕೊಂಡು ಬರುವಾಗ ಚಾಲಕನಿಗೆ ತಲೆ ಸುತ್ತು ಬಂದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಚಾಲಕ, ರಸ್ತೆಯ ವಿಭಜಕಕ್ಕೆ ಗುದ್ದಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದೆ.‌

ಅಪಘಾತವಾಗುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ‌. ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ಕಬ್ಬನ್ ಪಾರ್ಕ್ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details