ಬೆಂಗಳೂರು: ಮಹಾಮಾರಿ ಸೋಂಕು ನಗರದ ಪೊಲೀಸರನ್ನ ಬೆಂಬಿಡದೆ ಕಾಡುತ್ತಿದೆ. ಇದೀಗ ಕೊರೊನಾ ನಗರ ಪೊಲೀಸ್ ಆಯುಕ್ತ ಕಚೇರಿಗೇ ನುಗ್ಗಿದೆ.
ಹೌದು, ತಮ್ಮ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ನಗರ ಆಯುಕ್ತ ಭಾಸ್ಕರ್ ರಾವ್ ಹೋಂ ಕ್ವಾರಂಟೈನ್ ಆಗಿದ್ದಾರೆ. ಕಾರು ಚಾಲಕನ ಸಂಪರ್ಕದಲ್ಲಿದ್ದ ಹಿನ್ನೆಲೆ ಪೊಲೀಸ್ ಆಯುಕ್ತರು ಸ್ವತಃ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಲಾಕ್ ಡೌನ್ ಸಂಧರ್ಭ ಹಾಗೆ, ಇತರೆ ಬೇರೆ ಬೇರೆ ಕಡೆ ಪೊಲೀಸ್ ಆಯುಕ್ತ ಸಿಟಿ ರೌಂಡ್ಸ್ ಹಾಕಿದಾಗ ಕಾರು ಚಾಲಕ ಜೊತೆಗಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭಾಸ್ಕರ್ ರಾವ್ ಅವರು ಹೋಂ ಕ್ವಾರಂಟೈನ್ ಆಗಿದ್ದು, ಮನೆಯಲ್ಲಿದ್ದುಕೊಂಡೇ ನಗರದ ಲಾಕ್ ಡೌನ್ ಭದ್ರತೆ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಸದ್ಯ ಕೊರೊನಾ ಭೀತಿ ಇರುವ ಕಾರಣ ಕುಟುಂಬಸ್ಥರಿಂದ ಅವರು ದೂರ ಉಳಿದಿದ್ದಾರೆ.