ಬೆಂಗಳೂರು : ಈತ ಈ ಹಿಂದೆ ಸೌದಿಯಲ್ಲಿ ಪೊಲೀಸ್ ಕೆಲಸದಲ್ಲಿದ್ದ. ವಿಆರ್ಎಸ್ ಪಡೆದು ಕೇರಳಗೆ ಬಂದು ಬ್ಯುಸಿನೆಸ್ ಕೂಡ ಆರಂಭಿಸಿದ್ದ. ಮಗ ಐಟಿ ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳ ಪಡಿತಿದ್ದರೂ ಅಪ್ಪನಿಗೆ ಮಾತ್ರ ಓಡಾಡೋಕೆ ಒಂದು ಬೈಕ್ ಕೂಡ ಕೊಡಿಸಲಿರಲಿಲ್ಲ.
ಮಗ ಹಣ ಕೊಡಲಿಲ್ಲ, ಓಡಾಡೋಕೆ ಬೈಕು, ಕಾರು ಇಲ್ಲ ಅಂತಾ ಅಪ್ಪ ಆಯ್ಕೆ ಮಾಡಿಕೊಂಡಿದ್ದು ಕಳ್ಳತನ ವೃತ್ತಿ. ಅದು ಕೂಡ ಇವನು ಮನೆ ಮುಂದೆ ನಿಲ್ಲಿಸಿದ ಬೈಕ್ ಮತ್ತು ಕಾರ್ಗೆ ಕೈ ಹಾಕುತ್ತಿರಲಿಲ್ಲ.
ಶೋರೂಮ್‌ಗಳಲ್ಲಿ ಮಾತ್ರ ವಾಹನಗಳನ್ನ ಕದಿಯುತ್ತಿದ್ದ. ಹೀಗೆ ಶೋರೂಮ್‌ನ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ 61 ವರ್ಷದ ನಜೀರ್ ಅಹಮ್ಮದ್ನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ಮೈಸೂರು ರಸ್ತೆಯ ಕಾರು ಶೋರೂಮ್ ಮುಂದೆ ಪಾರ್ಕ್ ಮಾಡಿದ್ದ ಕಾರು ಕದ್ದಿದ್ದ ನಜೀರ್, ಬೈಕ್ ಶೋರೂಮ್ನಲ್ಲೂ ಒಂದು ಬೈಕ್ ಕಳ್ಳತನ ಮಾಡಿದ್ದ.