ಕರ್ನಾಟಕ

karnataka

ETV Bharat / state

ಮದ್ಯ ಸೇವಿಸಿ ಡ್ರೈವಿಂಗ್​.. ಬಿಬಿಎಂಪಿ‌ ಜಂಟಿ ಆಯುಕ್ತರ ಕಾರು ಚಾಲಕನಿಂದ ಅಪಘಾತ - ಬಿಬಿಎಂಪಿ ಜಂಟಿ ಆಯುಕ್ತ ಕಾರು ಅಪಘಾತ

ಬಿಬಿಎಂಪಿ ಜಂಟಿ ಆಯುಕ್ತರ ಕಾರಿನ ಚಾಲಕ ಮದ್ಯ ಸೇವಿಸಿ ಕಾರು ಚಲಾಯಿಸಿದ್ದು, ನಿಯಂತ್ರಣ ತಪ್ಪಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

Kn_bng_02_car_accident_7202806
ಬಿಬಿಎಂಪಿ‌ ಜಂಟಿ ಆಯುಕ್ತರ ಕಾರು ಅಪಘಾತ

By

Published : Aug 16, 2022, 4:34 PM IST

Updated : Aug 16, 2022, 4:47 PM IST

ಬೆಂಗಳೂರು: ಬಿಬಿಎಂಪಿ‌ ಜಂಟಿ ಆಯುಕ್ತ ನಾಗರಾಜ್ ಅವರ ಕಾರಿನ ಚಾಲಕ ಮದ್ಯದ ನಶೆಯಲ್ಲಿ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಚಾಲಕ ಶಿವಕುಮಾರ್ ಎಂಬಾತ ಕೆಲಸ ಮುಗಿಸಿಕೊಂಡು ಮದ್ಯ ಸೇವಿಸಿ ಆರ್.ಆರ್. ನಗರದಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದ ವೇಳೆ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಕಾರಿನ ಮುಂಭಾಗ ಹಾನಿಯಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಚಾಲಕ ಶಿವಕುಮಾರ್ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಪಾಸಣೆ ವೇಳೆ ಚಾಲಕ ಮದ್ಯ ಸೇವನೆ ಮಾಡಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ರಾಯಚೂರಿನಲ್ಲಿ ಗೂಡ್ಸ್​ ವಾಹನ ಬೈಕ್​ ಮಧ್ಯೆ ಭೀಕರ ಅಪಘಾತ.. ಮೂವರ ದುರ್ಮರಣ

Last Updated : Aug 16, 2022, 4:47 PM IST

ABOUT THE AUTHOR

...view details