ಬೆಂಗಳೂರು: ಕಾರುಗಳ ನಡುವೆ ಅಪಘಾತವಾದ ಘಟನೆ ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಎರ್ಟಿಗಾ ಕಾರು ಮತ್ತೊಂದು ಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಕೆಲವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ಅಪಘಾತ : ಸಂಚಾರ ದಟ್ಟಣೆ - ಕಾರುಗಳ ನಡುವೆ ಗಾಯವಾಗಿ ಕೆಲವರಿಗೆ ಗಾಯ
ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಕೆಲಕಾಲ ಸಂಚಾರದಟ್ಟಣೆ ಉಂಟಾಗಿತ್ತು.
ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ಅಪಘಾತ
ಇದನ್ನೂ ಓದಿ: ಪ್ರಧಾನಿಗೆ ನೇತಾಜಿ ಪ್ರತಿಮೆ ಉಡುಗೊರೆ ಕೊಟ್ಟ ಮೈಸೂರಿನ ಅರುಣ್: ಇಂಡಿಯಾ ಗೇಟ್ ಬಳಿ ಬೋಸ್ ವಿಗ್ರಹ ನಿರ್ಮಿಸುವ ಹೊಣೆ
ಅಪಘಾತದಿಂದಾಗಿ ಕಾರ್ಪೊರೇಷನ್ ಸರ್ಕಲ್, ಟೌನ್ ಹಾಲ್, ಕೆ.ಆರ್ ಸರ್ಕಲ್ ಸೇರಿದಂತೆ ಹಲವೆಡೆ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಹಲಸೂರು ಗೇಟ್ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Apr 5, 2022, 8:49 PM IST