ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯರಿಂದ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ : ಕ್ಯಾ. ಗಣೇಶ್ ಕಾರ್ಣಿಕ್ - ಕ್ಯಾ. ಗಣೇಶ್ ಕಾರ್ಣಿಕ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಶಾಸಕರುಗಳಿಗೆ ಪತ್ರ ಬರೆಯುವುದರಲ್ಲಿ ರಾಜಕೀಯ ದುರುದ್ದೇಶ ಮತ್ತು ತಮ್ಮ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ತಮ್ಮ ಹತಾಶ ಮನಸ್ಥಿತಿ ಎದ್ದು ಕಾಣುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ganesh karnik
ganesh karnik

By

Published : Apr 23, 2021, 10:21 PM IST

ಬೆಂಗಳೂರು :ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ದೇಶವನ್ನೇ ಕಾಡುತ್ತಿರುವ ಕೊರೊನಾ ಸಂಕಟದ ಈ ಕಷ್ಟಕಾಲದಲ್ಲಿ ಓರ್ವ ಮಾಜಿ ಮುಖ್ಯಮಂತ್ರಿಯಾಗಿ, ಪ್ರಸ್ತುತ ಪ್ರತಿಪಕ್ಷದ ನಾಯಕರಾಗಿ ತಮ್ಮ ಅಪಾರ ಅನುಭವದೊಂದಿಗೆ ಈ ಸಂಕಟದ ನಿರ್ವಹಣೆಯ ಸಂದರ್ಭದಲ್ಲಿ ರಚನಾತ್ಮಕ ಸಲಹೆಗಳನ್ನು ನೀಡುವ ಬದಲು, ಕೇವಲ ಮೊಸರಿನಲ್ಲಿ ಕಲ್ಲು ಹುಡುಕುವ ತಮ್ಮ ಎಂದಿನ ಕೀಳುಮಟ್ಟದ ವರ್ತನೆ ಮುಂದುವರಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರ ನಡೆ ಸರ್ವಥಾ ಅನಪೇಕ್ಷಣೀಯ, ತೀವ್ರ ಖಂಡನಾರ್ಹ ಮತ್ತು ನಾಡಿನ ಜನತೆಗೆ ಬಗೆದಿರುವ ದ್ರೋಹ. ನಿಮ್ಮಿಂದ ಈ ನಾಡಿನ ಜನತೆ ಈ ರೀತಿಯ ಕನಿಷ್ಠ ಮಟ್ಟದ ಟೀಕೆಗಳನ್ನು ಯಾವತ್ತೂ ನಿರೀಕ್ಷಿಸಿರಲಿಲ್ಲ.

ತಾವು ಶಾಸಕ ಮಿತ್ರರಿಗೆ ಬರೆದ ಪತ್ರವನ್ನು ಓದಿದಾಗ ತಾವೆಲ್ಲೋ ತಮ್ಮ ಜವಾಬ್ದಾರಿಯ ಸ್ಥಾನ ಮರೆತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಎಲ್ಲಾ ನಿರ್ಣಯಗಳನ್ನು ಟೀಕಿಸುವುದೇ ತಮ್ಮ ಏಕಮಾತ್ರ ಜವಾಬ್ದಾರಿ ಅಂದುಕೊಂಡಂತಿದೆ.

ಶಾಸಕರುಗಳಿಗೆ ಪತ್ರ ಬರೆಯುವುದರಲ್ಲಿ ರಾಜಕೀಯ ದುರುದ್ದೇಶ ಮತ್ತು ತಮ್ಮ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ತಮ್ಮ ಹತಾಶ ಮನಸ್ಥಿತಿ ಎದ್ದು ಕಾಣುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಈ ಸಂಕಟದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಈ ಮಹಾಮಾರಿಯು ನಿರ್ವಹಣೆಗಾಗಿ ತೊಡಗಿಸಿಕೊಳ್ಳುವ ಸಮಯವಾಗಿದೆ, ಕೇಂದ್ರ ಮತ್ತು ರಾಜ್ಯಗಳು ಕಳೆದ 70- 75 ವರ್ಷಗಳಲ್ಲಿ ಅಭಿವೃದ್ಧಿ ಪಡಿಸಿದ ವೈದ್ಯಕೀಯ ಮೂಲಸೌಕರ್ಯಗಳನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸುವಲ್ಲಿ ಮತ್ತು ಅವರ ಮನೋಸ್ಥೈರ್ಯವನ್ನು ಇನ್ನಷ್ಟು ದೃಢಗೊಳಿಸುವ ನಿಟ್ಟಿನಲ್ಲಿ ಪಕ್ಷಬೇಧವನ್ನು ಮರೆತು ಒಂದಾಗಿ ಕಾರ್ಯವೆಸಗಬೇಕಾದ ಅನಿವಾರ್ಯ ಸಂದರ್ಭದಲ್ಲೂ ಈ ರೀತಿಯ ಕೀಳುಮಟ್ಟದ ರಾಜಕಾರಣ ಎಷ್ಟು ಸರಿ ಎಂದು ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದೆ ಎನ್ನುವ ಒಂದೇ ಒಂದು ಕಾರಣಕ್ಕೆ ಎಲ್ಲಾ ವಿಷಯಗಳಲ್ಲೂ ತಮ್ಮ ಋಣಾತ್ಮಕ ಟೀಕೆಗಳು ನಿಮ್ಮ ರೋಗಗ್ರಸ್ಥ ಮನಸ್ಸಿಗೆ ಕೈಹಿಡಿದ ಕೈಗನ್ನಡಿಯಾಗಿದೆ. ನಾಡಿನ ಜನತೆ ನಿಮ್ಮ ಈ ವರ್ತನೆಯನ್ನು ಎಂದಿಗೂ ಕ್ಷಮಿಸುವುದಿಲ್ಲ.

ನಮ್ಮ ಪಕ್ಷದ ನಾಯಕರುಗಳ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ತಾವು ಬಳಸುತ್ತಿರುವ ಭಾಷೆ ನಿಮ್ಮ ರಾಜಕೀಯ ಅಸಹನಾ ಮನೋಭಾವವನ್ನು ಮತ್ತು ನಾನೊಬ್ಬನೇ ಶ್ರೇಷ್ಠ ಎನ್ನುವ ಅಹಂಕಾರದ ಪ್ರದರ್ಶನವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ದುರಹಂಕಾರದ ವರ್ತನೆ ಸರ್ವಥಾ ಖಂಡನೀಯ.

ಇನ್ನಾದರೂ ಎಚ್ಚತ್ತುಕೊಂಡು ಒಬ್ಬ ಪ್ರಬುದ್ಧ ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದು ನೀವು ಈ ಹಿಂದೆ ಅಲಂಕರಿಸಿದ ಸ್ಥಾನಕ್ಕೆ ಶೋಭೆ ತರಬಹುದೇ ಹೊರತು ನಿಮ್ಮ ಈ ರೀತಿಯ ಬೇಜವಾಬ್ದಾರಿಯ ವರ್ತನೆಯಲ್ಲ ಎಂದು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details