ಬೆಂಗಳೂರು :ಕ್ಯಾಪ್ ಜೆಮಿನಿ ಟೆಕ್ನಾಲಜಿ ಸರ್ವಿಸಸ್ ಇಂಡಿಯಾ ವತಿಯಿಂದ ಸಿಎಸ್ಆರ್ ಯೋಜನೆಯಡಿ ವಿಕ್ಟೋರಿಯಾ ಹಾಗೂ ಚರಕ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ 400 ಎಲ್ಎಂಪಿ ಆಕ್ಸಿಜನ್ ಘಟಕಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಕ್ಯಾಪ್ ಜೆಮಿನಿ ಸಂಸ್ಥೆಯ ಹಿರಿಯ ನಿರ್ದೇಶಕ ವಿಶ್ವನಾಥ್ ರಾಜೇಂದ್ರ ಹಾಗೂ ಮುರಳಿ ಶಂಕರ ನಾರಾಯಣನ್ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿದರು.
ಆಕ್ಸಿಜನ್ ಘಟಕ ಉದ್ಘಾಟನೆ ವೇಳೆ ಆರೋಗ್ಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ 108 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ಬಳಿಕ ಸಿಎಂ ಮಾತನಾಡಿ, ಸಿಎಸ್ಆರ್ ಯೋಜನೆಯಡಿ ವಿವಿಧ ಸಂಸ್ಥೆಗಳು ವೈದ್ಯಕೀಯ ಪರಿಕರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಇದರಿಂದ ಸಹಕಾರಿಯಾಗಿದೆ. ಸದ್ಯ 3ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ವೈದ್ಯಕೀಯ ಪರಿಕರಗಳ ದೇಣಿಗೆಯಿಂದ ಸರ್ಕಾರದ ಸಿದ್ಧತಾ ಕಾರ್ಯಕ್ಕೆ ಸಹಕಾರವಾದಂತಾಗಲಿದೆ ಎಂದರು.
ಓದಿ: ಸಿಎಂ ರೇಸ್ನಲ್ಲಿ ಬಿಜೆಪಿ ನಾಯಕರು; ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸ್ತಿದ್ದಾರೆ ಆಕಾಂಕ್ಷಿಗಳು!