ಕರ್ನಾಟಕ

karnataka

ETV Bharat / state

Cancer disease: ತನ್ನಿಂದ ಮಗಳಿಗೂ ಕ್ಯಾನ್ಸರ್ ತಗುಲಿತೆಂದು ಬೇಸರ.. ಬೆಂಗಳೂರಲ್ಲಿ ಮನನೊಂದು ಕಾನ್ಸ್ಟೇಬಲ್ ಆತ್ಮಹತ್ಯೆ - Etv Bharat Kannada

ತನ್ನಿಂದಾಗಿ ಮಗಳಿಗೂ ಕ್ಯಾನ್ಸ್​ರ ತಗುಲಿತೆಂದು ಮನನೊಂದ ಕಾನ್ಸ್​ಟೇಬಲ್​ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ಕಾನ್ಸ್​ಟೇಬಲ್​
ಮೃತ ಕಾನ್ಸ್​ಟೇಬಲ್​

By

Published : Jun 15, 2023, 12:52 PM IST

ಬೆಂಗಳೂರು: ತನ್ನಿಂದಾಗಿಯೇ ತನ್ನ ಮಗಳಿಗೂ ಮಾರಕ ಕ್ಯಾನ್ಸರ್ ರೋಗ ತಗುಲಿದೆ ಎಂದು ಮನನೊಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬುಧವಾರ ಸಂಜೆ ಡೈರಿ ಸರ್ಕಲ್ ಬಳಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ನಡೆದಿದೆ. ಅಶೋಕ್​ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ್ (44) ಆತ್ಮಹತ್ಯೆಗೆ ಶರಣಾದ ಕಾನ್ಸ್ಟೇಬಲ್.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದವರಾದ ಕುಮಾರ್, ನಗರದ ಡೈರಿ ಸರ್ಕಲ್ ಬಳಿಯಿರುವ ಪೊಲೀಸ್ ವಸತಿ ಸಮುಚ್ಚಯದಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್​ನ ಕೆಲ ಲಕ್ಷಣಗಳು ಅವರ ಓರ್ವ ಮಗಳಿಗೂ ಸಹ ಕಾಣಿಸಿಕೊಂಡಿತ್ತು. ಚಿಕಿತ್ಸೆ ಕೊಡಿಸಿದ ಬಳಿಕ ಮಗಳು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದಳು. ಆದರೆ ತನ್ನಿಂದಲೇ ಮಗಳಿಗೆ ಕ್ಯಾನ್ಸರ್ ಎಂದು ಮನನೊಂದಿದ್ದ ಕುಮಾರ್, ನಿನ್ನೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಸಾವಿನಲ್ಲಿಯೂ ಸಾರ್ಥಕತೆ:ಆತ್ಮಹತ್ಯೆಗೆ ಶರಣಾದ ಕುಮಾರ್​ ಅವರ ಇಚ್ಛೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಸದ್ಯ ಮೃತದೇಹವನ್ನು ಅವರ ಹುಟ್ಟೂರ ಚನ್ನಗಿರಿಗೆ ಕೊಂಡೊಯ್ಯಲು ಸಿದ್ಧತೆ ಮಾಡಲಾಗಿದೆ.

ಕ್ಯಾನ್ಸರ್​​ನಿಂದ ಮೃತಪಟ್ಟ ವ್ಯಕ್ತಿ, ದುಃಖ ತಾಳಲಾರದೆ ಚಿತೆಗೆ ಹಾರಿ ಸ್ನೇಹಿತ ಆತ್ಮಹತ್ಯೆ

ಇತ್ತೀಚೆಗೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ನದಿ ತಟದಲ್ಲಿ ಅಂತ್ಯಕ್ರಿಯೆಯೂ ನೆರವೇರುತ್ತಿತ್ತು. ಈ ವೇಳೆ ದುಃಖ ತಾಳಲಾರದೆ ಅವರ ಸ್ನೇಹಿತ ಕೂಡ ಅದೇ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಾರಕ ಕ್ಯಾನ್ಸರ್‌ ಯಿಲೆಯಿಂದ ಅಶೋಕ್‌ ಎಂಬುವವರು ಮೃತಪಟ್ಟಿದ್ದರು. ಯಮುನಾ ನದಿ ಬಳಿ ಅವರ ಅಂತ್ಯಕ್ರಿಯೆ ನಡೆಯುತ್ತಿತ್ತು. ಆಗ ಮೃತನ ಸ್ನೇಹಿತ ಆನಂದ್ ರಜಪೂತ್ ಎಂಬುವವರು ಸ್ನೇಹಿತನನ್ನು ಕಳೆದುಕೊಂಡ ದುಃಖ ತಾಳಲಾಗದೆ ಅದೇ ಚಿತೆಗೆ ಹಾರಿ ಪ್ರಾಣ ಬಿಡಲು ನಿರ್ಧರಿಸಿದ್ದರು.

ಚಿತೆಗೆ ಹಾರಿದ ಸ್ನೇಹಿತನನ್ನು ಅಲ್ಲಿದ್ದ ಸ್ಥಳೀಯರು ಬಿದಿರಿನ ಸಹಾಯದಿಂದ ಹೊರತೆಗದಿದ್ದರು. ಅಷ್ಟರಲ್ಲಾಗಲೇ ಶೇ.90ರಷ್ಟು ಸುಟ್ಟ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಗ್ರಾ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಆದರೆ ಚಿಕತ್ಸೆ ಫಲಿಸದೆ ಸಾವನಪ್ಪಿದ್ದರು.

ಬಾಡಿ ಶೇಮಿಂಗ್​ಗೆ ಯುವಕ ಆತ್ಮಹತ್ಯೆ..ಬಿಹಾರದ ನಳಂದಾ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮುಖ ಹಾಗೂ ಕೂದಲು ಸರಿ ಇಲ್ಲವೆಂದು ನೊಂದು ಡೆತ್​ ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ವಿಜಯ್ ಕುಮಾರ್ ಸಾವಿಗೆ ಶರಣಾದ ಯುವಕ.

ಏಕಾಂಗರಸರೈ ಗ್ರಾಮದ ಏಕಾಂಗರ್ಡಿಹ್ ನಿವಾಸಿ ಜೈ ನಾರಾಯಣ ಲಾಲ್ ಎಂಬುವವರ ಪುತ್ರನಾಗಿರುವ ವಿಜಯ್ ಕುಮಾರ್ ತನ್ನ ದೇಹದ ಬಗ್ಗೆ ಅಸಮದಾನದಿಂದ ಸಾವಿಗೆ ಶರಣಾಗಿದ್ದ. ಸಾವಿಗೂ ಮುನ್ನ ಯುವಕ ಡೆತ್​ನೋಟ್​ ಬರೆದಿಟ್ಟಿದ್ದು, ತನ್ನ ಕಠಿಣ ನಿರ್ಧಾರಕ್ಕೆ ಕೆಟ್ಟ ಮುಖ ಮತ್ತು ಕೂದಲು ಕಾರಣ ಎಂದು ಉಲ್ಲೇಖಿಸಿದ್ದ.

ಇದನ್ನೂ ಓದಿ:Belagavi Crime: ಕುಡಿತದಿಂದ ಕೌಟುಂಬಿಕ ಕಲಹ.. ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ABOUT THE AUTHOR

...view details