ಬೆಂಗಳೂರು: ತುರ್ತು ರೈಲ್ವೆ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ ಜನಶತಾಬ್ದಿ ರೈಲು ಸೇರಿದಂತೆ ರಾಜಧಾನಿಯಿಂದ ಹುಬ್ಬಳ್ಳಿ ಮಾರ್ಗದ ರೈಲುಗಳ ಓಡಾಟ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ದೇವರಗುಡ್ಡ - ಬ್ಯಾಡಗಿ ಮಾರ್ಗದಲ್ಲಿ ಲೈನ್ ಬ್ಲಾಕ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರ ವರೆಗೆ ಮಾತ್ರ ಸಂಚರಿಸಲಿದ್ದು, ಹರಿಹರದಿಂದ ಹುಬ್ಬಳ್ಳಿವರೆಗಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ರೈಲು ಹರಿಹರದಿಂದ ಬೆಂಗಳೂರಿಗೆ ಹಿಂದಿರುಗಲಿದೆ ಎಂದು ಇಲಾಖೆ ತಿಳಿಸಿದೆ.