ಕರ್ನಾಟಕ

karnataka

ETV Bharat / state

ಡಿವೈಎಸ್ಪಿ, ಇನ್​​​ಸ್ಪೆಕ್ಟರ್​​ಗಳು ಸೇರಿ 10 ಅಧಿಕಾರಿಗಳ ವರ್ಗಾವಣೆ ಆದೇಶ ರದ್ದು - Cancel the transfer order ofDYSPand In-Specters

ಜನವರಿ 14 ರಂದು ಡಿವೈಎಸ್ಪಿ, ಇನ್​​ಸ್ಪೆಕ್ಟರ್ ಸೇರಿ 34 ಮಂದಿ ಪೊಲೀಸರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು..

ವಿಧಾನಸೌಧ
ವಿಧಾನಸೌಧ

By

Published : Jan 17, 2022, 5:20 PM IST

ಬೆಂಗಳೂರು :ಆಡಳಿತಾತ್ಮಕ ಕಾರಣಗಳಿಂದ ವರ್ಗಾವಣೆಗೊಂಡಿದ್ದ ರಾಜ್ಯದ ಆರು ಮಂದಿ ಡಿವೈಎಸ್ಪಿ ಹಾಗೂ ನಾಲ್ಕು ಜನ ಇನ್​​​ಸ್ಪೆಕ್ಟರ್ ಸೇರಿ 10 ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.

ಜೆ.ಸಿ. ನಗರ ಉಪವಿಭಾಗದ ರೀನಾ ಸುವರ್ಣ, ಹಲಸೂರು ಉಪವಿಭಾಗದ ಕುಮಾರ್, ಉತ್ತರ ಸಂಚಾರ ಉಪವಿಭಾಗದ ಗೋಪಾಲ್ ಕೃಷ್ಣ ಗೌಡರ್ ಸೇರಿದಂತೆ ಆರು ಮಂದಿ ಡಿವೈಎಸ್ಪಿ ವರ್ಗಾವಣೆ ರದ್ದುಗೊಳಿಸಲಾಗಿದೆ.

ವರ್ಗಾವಣೆ ರದ್ದುಗೊಳಿಸಿರುವ ಆದೇಶ ಪ್ರತಿ

ಇನ್​​​ಸ್ಪೆಕ್ಟರ್​​ಗಳಾದ ರಾಜ್ಯ ಗುಪ್ತವಾರ್ತೆಯ ಇನ್​ಸ್ಪೆಕ್ಟರ್ ಕಾಶಿನಾಥ್, ಚಿತ್ರದುರ್ಗದ ಸಿಇಎನ್ ಠಾಣೆಯ ಇನ್​​ಸ್ಪೆಕ್ಟರ್ ರಮಕಾಂತ್ ಯಲ್ಲಪ್ಪ ಹುಲ್ಲಾರ್ ಸೇರಿ ನಾಲ್ಕು ಮಂದಿ ಇನ್‌ಸ್ಪೆಕ್ಟರ್​​ಗಳ ವರ್ಗಾವಣೆ ಆದೇಶ ತಡೆಹಿಡಿಯಲಾಗಿದೆ ಎಂದು ಐಜಿಪಿ‌ ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಣೆ

ಜನವರಿ 14 ರಂದು ಡಿವೈಎಸ್ಪಿ, ಇನ್​​ಸ್ಪೆಕ್ಟರ್ ಸೇರಿ 34 ಮಂದಿ ಪೊಲೀಸರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ABOUT THE AUTHOR

...view details