ಬೆಂಗಳೂರು: ನಾಳೆ ನಗರದ ಅರಮನೆ ಮೈದಾನದಲ್ಲಿರುವ ವೈಟ್ ಪೆಟಲ್ಸ್ನಲ್ಲಿ ಕರೆಯಲಾಗಿದ್ದ ಬೆಂಗಳೂರಿನ ಸಚಿವರು, ಶಾಸಕರು, ಸಂಸದರು, ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗು ಬಿಬಿಎಂಪಿ ಸದಸ್ಯರ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಲಾಗಿದೆ.
ವಲಯವಾರು ಉಸ್ತುವಾರಿ ನೇಮಕ: ಬೆಂಗಳೂರು ಜನಪ್ರತಿನಿಧಿಗಳ ಜೊತೆಗಿನ ಸಿಎಂ ಸಭೆ ರದ್ದು
ಬೆಂಗಳೂರಿನಲ್ಲಿ 8 ವಲಯವಿದ್ದು ಒಂದೊಂದು ವಲಯವನ್ನು ಒಬ್ಬೊಬ್ಬ ಸಚಿವರಿಗೆ ಉಸ್ತುವಾರಿ ನೀಡಲು ನಿರ್ಧರಿಸಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಜನಪ್ರತಿನಿಧಿಗಳ ಸಭೆಯನ್ನು ಸಿಎಂ ರದ್ದುಪಡಿಸಿದ್ದಾರೆ.
ಪ್ರತಿ ವಾರ್ಡ್ ಮಟ್ಟದಿಂದಲೂ ಕೊರೊನಾ ನಿಯಂತ್ರಣ ಆಗಬೇಕಿರುವ ಹಿನ್ನೆಲೆಯಲ್ಲಿ ಸಂಸದರಿಂದ ಪಾಲಿಕೆ ಸದಸ್ಯರವರೆಗೆ ಎಲ್ಲಾ ಜನಪ್ರತಿನಿಧಿಗಳಿಂದ ಸಹಕಾರ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ಕರೆದಿದ್ದರು. ಆದರೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ನಿಯಂತ್ರಣಕ್ಕಾಗಿ ವಲಯವಾರು ಜವಾಬ್ದಾರಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ 8 ವಲಯವಿದ್ದು ಒಂದೊಂದು ವಲಯವನ್ನು ಒಬ್ಬೊಬ್ಬ ಸಚಿವರಿಗೆ ಉಸ್ತುವಾರಿ ನೀಡಲು ನಿರ್ಧರಿಸಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಜನಪ್ರತಿನಿಧಿಗಳ ಸಭೆಯನ್ನು ಸಿಎಂ ರದ್ದುಪಡಿಸಿದ್ದಾರೆ.
ಆಯಾ ವಲಯಗಳ ಉಸ್ತುವಾರಿ ಹೊತ್ತ ಸಚಿವರು, ಸ್ಥಳೀಯ ಶಾಸಕರು, ಸಂಸದರು, ಪಾಲಿಕೆ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಕ್ರಮ ಕೈಗೊಳ್ಳಲಿದ್ದಾರೆ.