ಬೆಂಗಳೂರು:ಅತೃಪ್ತರು ಬಂದ ಮೇಲೆ ಅವರ ಬಗ್ಗೆ ಒಂದು ಒಳ್ಳೆ ಸಿನಿಮಾ ತೆಗೆಯಬಹುದು ಎಂದು ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಮಾತನಾಡಿದ ಅವರು ಅತೃಪ್ತ ಶಾಸಕರ ಮೇಲೆ ಸ್ವಲ್ಪ ಗರಂ ಆದಂತೆ ಪ್ರತಿಕ್ರಿಯೆ ನೀಡಿದರು.
ಅತೃಪ್ತರು ಬಂದಮೇಲೆ ಒಂದೊಳ್ಳೆ ಸಿನಿಮಾ ತೆಗೆಯಬಹುದು: ಶಿವಕುಮಾರ್ ವ್ಯಂಗ್ಯ - film
ರಾಜೀನಾಮೆ ನೀಡಿ ನಿಗೂಢ ಸ್ಥಳದಲ್ಲಿರುವ ಶಾಸಕರ ಮೇಲೆ ಗರಂ ಆದ ಸಚಿವ ಡಿಕೆ ಶಿವಕುಮಾರ್, ಅವರು ಬಂದ ಮೇಲೆ ಅವರ ಬಗ್ಗೆ ಒಂದು ಒಳ್ಳೆ ಸಿನಿಮಾ ತೆಗೆಯಬಹುದು ಎಂದು ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.
ಸಚಿವ ಡಿ ಕೆ ಶಿವಕುಮಾರ್
ಮುಂಬೈನಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಪೊಲೀಸರು ಅವಕಾಶ ನೀಡದಿರುವ ಬಗ್ಗೆ ಸಿಡಿಮಿಡಿಗೊಂಡ ಡಿಕೆಶಿ, ಎಲ್ಲಾ ಶಾಸಕರು ಮುಂಬೈನಲ್ಲಿ ಗನ್ ಪಾಯಿಂಟ್ನಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿಯವರ ರಾಜಕಾರಣದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಅವರ ರಾಜಕಾರಣ ಅವರಿಗೆ, ನಮ್ಮ ರಾಜಕಾರಣ ನಮಗೆ ನಮಗೆ. ಸೋಮವಾರ ನಡೆಯುವ ವಿಶ್ವಾಸಮತ ನಿರ್ಣಯದಲ್ಲಿ ನಾವು ಜಯ ಗಳಿಸುತ್ತೇವೆ ಎಂದರು.