ಕರ್ನಾಟಕ

karnataka

ETV Bharat / state

ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ತಿಳಿವಳಿಕಾ ಸೂಚಿ - Cams appeal to parents not to send students to protests

ರಾಜ್ಯದಲ್ಲಿ ಅನೇಕ ಸಂಘಟನೆಗಳು ನಡೆಸುತ್ತಿರುವಪ್ರತಿಭಟನೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಪ್ರತಿಭಟನೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ( ಕ್ಯಾಮ್ಸ್) ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕಾ ಸೂಚಿ ಹೊರಡಿಸಿದೆ.

shashi kumar
ಕಾರ್ಯದರ್ಶಿ ಶಶಿಕುಮಾರ್

By

Published : Jan 12, 2020, 5:43 PM IST

ಬೆಂಗಳೂರು:ಯಾವುದೇ ರಾಜಕೀಯ ಪ್ರೇರಿತ ಸಂಘಟನೆಗಳು ನಡೆಸುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ( ಕ್ಯಾಮ್ಸ್) ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕಾ ಸೂಚಿ ಹೊರಡಿಸಿದೆ ಎಂದು ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.

ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ಕಾರ್ಯದರ್ಶಿ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಅನೇಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಪ್ರತಿಭಟನೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮನಸ್ಸಿನ ಮೇಲೆ ಯಾವುದೇ ದ್ವೇಷದ ಪರಿಣಾಮ ಬೀಳಬಾರದೆಂಬ ಕಾರಣಕ್ಕೆ ಇಂತಹದೊಂದು ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಕ್ಯಾಮ್ಸ್​ ತಮ್ಮ ಸದಸ್ಯತ್ವದ ಶಾಲೆಗಳಿಗೆ ಈ ಆದೇಶ ನೀಡಿದ್ದು, ಶಾಲಾ ಶಿಕ್ಷಕರು,ಆಡಳಿತ ಮಂಡಳಿಯವರು ಪಾಲಕ ಪೋಷಕರಿಗೆ ಜಾಗೃತಿ ಮೂಡಿಸುಂತೆ ಸೂಚಿಸಲಾಗಿದೆ ಎಂದರು.

For All Latest Updates

ABOUT THE AUTHOR

...view details