ಬೆಂಗಳೂರು:ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 'ಕೇಕ್ ಶೋ' ಇಂದಿನಿಂದ ಜನವರಿ 1ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಕೇಕ್ ಶೋ ಆಯೋಜಕ ಜಿ. ಮನೀಶ್ ತಿಳಿಸಿದ್ದಾರೆ.
ಕೇಕ್ ಶೋ ಕುರಿತು ಮಾತನಾಡಿರುವ ಅವರು, ಈ ಬಾರಿ ವಿಶೇಷವಾಗಿ ಥಿಂಕ್ ಲೋಕಲ್ - ಆ್ಯಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದೆ. ತಯಾರಿಸಿರುವ ಈ ಕೇಕ್‌ಗಳು ಈ ಬಾರಿಯ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮದಲ್ಲಿ ವಿಶ್ವದ ಅತಿದೊಡ್ಡ ಕೇಕ್‌ಗಳಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಕೆಯ ಕೆಲಸಗಳನ್ನು ನಡೆಸಲಾಗಿದೆ. ಪ್ರಾರಂಭದಲ್ಲಿ ಯಾವ ಥೀಮ್‌ನಲ್ಲಿ ಮಾಡಬೇಕು ಎನ್ನುವುದರ ಬಗ್ಗೆೆ ಚಿಂತನೆ ನಡೆಸಿ, ಕೊನೆಯಲ್ಲಿ 3ಡಿ ಸಕ್ಕರೆ - ಕೇಕ್ ರಚನೆಗೆ ಒಂದು ಆಕಾರ ನೀಡಲಾಗುತ್ತದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಇದಕ್ಕಾಗಿ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್ - ಸಕ್ಕರೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.