ಕರ್ನಾಟಕ

karnataka

ETV Bharat / state

ಸಿಎಂ ಜೊತೆಗಿನ ಚರ್ಚೆ ವೇಳೆ ಸಚಿವ ಸ್ಥಾನವನ್ನೇ ಕೇಳಲಿಲ್ಲವಂತೆ ಎಸ್. ಟಿ. ಸೋಮಶೇಖರ್!

ಉಪಚುನಾವಣೆ ಮುಗಿದು ಜಯ ಗಳಿಸಿದ್ದಾಗಿದೆ. ಇಷ್ಟೊತ್ತಿಗಾಗಲೇ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದ್ರೆ ಸಿಎಂ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿಲ್ಲ ಎಂದು ಶಾಸಕ ಎಸ್​​. ಟಿ. ಸೋಮಶೇಖರ್​ ಹೇಳಿದ್ದಾರೆ.

S.T.Somashekar
ಎಸ್.ಟಿ.ಸೋಮಶೇಖರ್ ಹೇಳೀಕೆ

By

Published : Dec 12, 2019, 7:58 PM IST

ಬೆಂಗಳೂರು:ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಏನು ತೀರ್ಮಾನ ಮಾಡಿದ್ದಾರೋ ಗೊತ್ತಿಲ್ಲವೆಂದು ನೂತನ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನಂತೂ ಸಚಿವ ಸ್ಥಾನ ಕೊಡಿ ಅಂತಾ ಕೇಳಿಲ್ಲ. ಜೊತೆಗೆ ಇದೇ ಖಾತೆ ಬೇಕಂತಲೂ ಒತ್ತಾಯಿಸಿಲ್ಲ. ಅದೆಲ್ಲವನ್ನು ಸಿಎಂ ನಿರ್ಧಾರ ಮಾಡ್ತಾರೆ ಎಂದರು.

ಎಸ್.ಟಿ. ಸೋಮಶೇಖರ್ ಹೇಳಿಕೆ

ನಾಳೆ ಮಧ್ಯಾಹ್ನ12.30ಕ್ಕೆ ಶಾಸಕರಾಗಿ ಪ್ರಮಾಣವಚನ ತೆಗೆದುಕೊಳ್ಳಬೇಕು. ಅದಕ್ಕಾಗಿ ಇಂದು ಸ್ಪೀಕರ್ ಭೇಟಿ ಮಾಡಿ ವಿಚಾರಿಸಲು ಬಂದಿದ್ದೇವೆ. ನಾಳಿನ ಪ್ರಮಾಣ‌ವಚನ ಬಗ್ಗೆ ಸ್ಪೀಕರ್ ಏನು ತೀರ್ಮಾನ ಮಾಡ್ತಾರೋ ನೋಡೋಣ ಎಂದು ಶಾಸಕ ಸೋಮಶೇಖರ್​ ತಿಳಿಸಿದ್ರು.

ABOUT THE AUTHOR

...view details