ಕರ್ನಾಟಕ

karnataka

ETV Bharat / state

ಕೇಂದ್ರ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತ: ರಾಜ್ಯದ ಸಂಸದರಲ್ಲಿ ಗರಿಗೆದರಿದ ನಿರೀಕ್ಷೆ! - Suresh Anagadi News

ರಾಜ್ಯದಲ್ಲಿ ದಾಖಲೆಯ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಕೇಂದ್ರದ ಸಂಪುಟದಲ್ಲಿ ಸಿಕ್ಕಿರುವುದು ಎರಡು ಸ್ಥಾನ ಮಾತ್ರ. ಮೂರು ಸ್ಥಾನ ಸಿಕ್ಕಿದ್ದರೂ ಸುರೇಶ್ ಅಂಗಡಿ ನಿಧನದ ನಂತರ ಆ ಸ್ಥಾನಕ್ಕೆ ಯಾರನ್ನೂ ನೇಮಿಸದ ಕಾರಣ ರಾಜ್ಯದ ಇಬ್ಬರು ಮಾತ್ರ ಸಚಿವ ಸ್ಥಾನದಲ್ಲಿದ್ದಾರೆ. ಇದೀಗ ಸಂಪುಟ ವಿಸ್ತರಣೆಯಾಗುತ್ತಿದ್ದು ಕನಿಷ್ಠ ಇನ್ನು ಎರಡು ಸ್ಥಾನಗಳಾದರೂ ರಾಜ್ಯಕ್ಕೆ ಲಭಿಸಬೇಕು ಎಂದು ಬಿಜೆಪಿ ನಾಯಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ಹೈಕಮಾಂಡ್ ಮುಂದೆ ಹೇಳುವ ಮನಸ್ಸು ಮಾಡಿಲ್ಲ.

cabinet-expansion
ಕೇಂದ್ರ ಸಂಪುಟ ವಿಸ್ತರಣೆ

By

Published : Jun 21, 2021, 5:36 PM IST

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.O ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಸನ್ನಿಹಿತವಾಗಿದ್ದು, ರಾಜ್ಯದಿಂದ ಯಾವುದೇ ಪ್ರಬಲ ಒತ್ತಾಯ ಮಾಡುವುದಾಗಲಿ, ಹೆಸರುಗಳ ಶಿಫಾರಸು ಮಾಡುವುದಾಗಲಿ ಮಾಡಿಲ್ಲ. ವರಿಷ್ಠರೇ ಸಚಿವ ಸ್ಥಾನ ಕೊಟ್ಟರೆ ಕೊಡಲಿ ಎನ್ನುವ ಧೋರಣೆ ರಾಜ್ಯ ಬಿಜೆಪಿಯಲ್ಲಿ ಕಂಡು ಬಂದಿದೆ.

ರಾಜ್ಯದಲ್ಲಿ ದಾಖಲೆಯ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಕೇಂದ್ರದ ಸಂಪುಟದಲ್ಲಿ ಸಿಕ್ಕಿರುವುದು ಎರಡು ಸ್ಥಾನ ಮಾತ್ರ. ಮೂರು ಸ್ಥಾನ ಸಿಕ್ಕಿದ್ದರೂ ಸುರೇಶ್ ಅಂಗಡಿ ನಿಧನದ ನಂತರ ಆ ಸ್ಥಾನಕ್ಕೆ ಯಾರನ್ನೂ ನೇಮಿಸದ ಕಾರಣ ರಾಜ್ಯದ ಇಬ್ಬರು ಮಾತ್ರ ಸಚಿವ ಸ್ಥಾನದಲ್ಲಿದ್ದಾರೆ.

ಇದೀಗ ಸಂಪುಟ ವಿಸ್ತರಣೆಯಾಗುತ್ತಿದ್ದು, ಕನಿಷ್ಟ ಇನ್ನು ಎರಡು ಸ್ಥಾನಗಳಾದರೂ ರಾಜ್ಯಕ್ಕೆ ಲಭಿಸಬೇಕು ಎಂದು ಬಿಜೆಪಿ ನಾಯಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ಹೈಕಮಾಂಡ್ ಮುಂದೆ ಹೇಳುವ ಮನಸ್ಸು ಮಾಡಿಲ್ಲ. ಸುರೇಶ್ ಅಂಗಡಿ ನಿಧನದಿಂದ ತೆರವಾದ ಸಚಿವ ಸ್ಥಾನವನ್ನಾದರೂ ರಾಜ್ಯಕ್ಕೆ ಕೊಡಿ ಎಂದು ಕೇಳುವ ಧೈರ್ಯವನ್ನೂ ರಾಜ್ಯ ನಾಯಕರು ಮಾಡಿಲ್ಲ.

ಎರಡು ಬಾರಿ ಚಿಕ್ಕಪೇಟೆಯಿಂದ ಶಾಸಕರಾಗಿ ಆಯ್ಕೆಯಾಗಿ ನಂತರ ಸತತವಾಗಿ ಮೂರು ಬಾರಿ ಬೆಂಗಳೂರು ಕೇಂದ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ ಮೋಹನ್ ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಶಿ ಮೂಲಕ ಅಪೇಕ್ಷೆಯನ್ನು ಹೈಕಮಾಂಡ್​​​ಗೆ ತಲುಪಿಸುವ ಪ್ರಯತ್ನ ನಡೆಸಿದ್ದಾರೆ.

ಇವರ ಜೊತೆಗೆ ಈ ಬಾರಿ ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದಿರುವ ಸಂಸದ ಡಾ.ಉಮೇಶ್ ಜಾಧವ್ ಕೂಡ ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ.‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಪುತ್ರನನ್ನು ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ವಿಧಾನಸಭಾ ಕ್ಷೇತ್ರವನ್ನೂ ಬಿಜೆಪಿ ತೆಕ್ಕೆಗೆ ಸಿಗುವಂತೆ ಮಾಡಿದ್ದಾರೆ. ಹೀಗಾಗಿ ಸಚಿವ ಸ್ಥಾನ ಸಿಗಲಿದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ನಾಲ್ಕು ಬಾರಿ ಗೆದ್ದಿರುವ ಪಿ.ಸಿ ಗದ್ದಿಗೌಡರ್, ಎರಡು ಬಾರಿ ಗೆದ್ದಿರುವ ಕರಡಿ ಸಂಗಣ್ಣ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಹೈಕಮಾಂಡ್ ಮಟ್ಟದಲ್ಲಿ ಲಾಭಿ ಮಾಡಲು ಸಾಧ್ಯವಾಗದೇ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಎರಡು ಬಾರಿ ಬೀದರ್ ನಿಂದ ಸಂಸದರಾಗಿ ಆಯ್ಕೆಯಾಗಿರುವ ಹಿರಿಯ ಸಂಸದ ಭಗವಂತ ಖೂಬಾ, ಮೂರು ಬಾರಿ ಹಾವೇರಿಯಿಂದ ಆಯ್ಕೆಯಾಗಿರುವ ಶಿವಕುಮಾರ ಉದಾಸಿ ಇಬ್ಬರು ಕೂಡ ಲಿಂಗಾಯತ ಕೋಟಾದಡಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಎರಡು ಬಾರಿ ಮೈಸೂರಿನಿಂದ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಕೂಡ ಯೂತ್ ಕೋಟಾದಡಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ‌.

ಮಾಜಿಗಳಿಗೆ ಅವಕಾಶ ಅನುಮಾನ:ಇನ್ನು ಮೋದಿ 1.O ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಜಿಎಂ ಸಿದ್ದೇಶ್ವರ್, ರಮೇಶ್ ಜಿಗಜಿಣಗಿ, ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಅವಕಾಶ ಅನುಮಾನವಾಗಿದೆ. ಜಿ.ಎಂ ಸಿದ್ದೇಶ್ವರ್ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಜಿಗಜಿಣಗಿ ಬಗ್ಗೆ ಒಲವಿಲ್ಲ. ಅನಂತ್ ಕುಮಾರ್ ಹೆಗಡೆಗೆ ಆರೋಗ್ಯ ಸರಿಯಿಲ್ಲ ಹೀಗಾಗಿ ಈ ಮೂವರಿಗೂ ಅವಕಾಶ ಸಿಗುವುದಿಲ್ಲ ಎನ್ನಲಾಗುತ್ತಿದೆ.

ಸಿಎಂ ಪುತ್ರನಿಗೆ ಅವಕಾಶ:ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂತಹ ಸನ್ನಿವೇಶ ಇದ್ದರೆ ಅಥವಾ ಭವಿಷ್ಯ ಸಿಎಂ ಬದಲಾವಣೆ ಮಾಡುವ ಪ್ರಸ್ತಾಪ ಹೈಕಮಾಂಡ್ ಮುಂದೆ ಇದ್ದಲ್ಲಿ ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನಕ್ಕೆ ಸಿಎಂ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರಗೆ ಅವಕಾಶ ನೀಡಲಾಗುತ್ತದೆ ಎನ್ನುವ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.

ರಾಜ್ಯ ಘಟಕ ನೇರವಾಗಿ ಸಂಪುಟದಲ್ಲಿ ಅವಕಾಶ ಕೊಡಿ ಎಂದು ಬೇಡಿಕೆ ಇರಿಸಿಲ್ಲ. ರಾಜ್ಯ ನಾಯಕರು ನಾಯಕತ್ವ ಬದಲಾವಣೆ ವಿಷಯದ ಗೊಂದಲದಲ್ಲಿ ಮುಳುಗಿದ್ದಾರೆ‌. ಆಕಾಂಕ್ಷಿಗಳೂ ಹೈಕಮಾಂಡ್ ನಾಯಕರ ಬಳಿ ಮನವಿ ಮಾಡಿಲ್ಲ. ಅಚ್ಚರಿಯ ಅವಕಾಶ ಸಿಗಲಿದೆ.

ರಾಜ್ಯವನ್ನು ಪರಿಗಣಿಸಿದಲ್ಲಿ ನಮ್ಮ ಆಯ್ಕೆ ಖಚಿತ ಎಂದು ಹಿರಿಯ ಸಂಸದರು ಅವಕಾಶದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ರಾಜ್ಯಕ್ಕೆ ಅವಕಾಶ ಸಿಗಲಿದೆಯಾ? ಕನಿಷ್ಠ ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನವಾದರೂ ದಕ್ಕುತ್ತದೆಯಾ ಕಾದು ನೋಡಬೇಕಿದೆ.

ABOUT THE AUTHOR

...view details