ಬೆಂಗಳೂರು :ಜುಲೈ 19ನೇ ತಾರೀಕಿನಂದು ಮೆಜೆಸ್ಟಿಕ್ ನಿಂದ ಕಾರು ಸಮೇತ ಕಾಣೆಯಾಗಿದ್ದ ಚಾಲಕ ನರಸಿಂಹ ಶವವಾಗಿ ಪತ್ತೆಯಾಗಿದ್ದಾನೆ.
ಮೆಜೆಸ್ಟಿಕ್ನಿಂದ ಕಾರು ಸಮೇತ ಕಾಣೆಯಾಗಿದ್ದ ಚಾಲಕ ಶವವಾಗಿ ಪತ್ತೆ - accused arrest
ನಿಗೂಢವಾಗಿ ಕಾಣೆಯಾಗಿದ್ದ ಕಾರು ಚಾಲಕ ಹೆಣವಾಗಿ ಪತ್ತೆಯಾಗಿದ್ದು, ಚಾಲಕನನ್ಮಾನು ಕೊಲೆ ಮಾಡಿರುವ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ನರಸಿಂಹ ಕಾಣೆಯಾದ ಕುರಿತು ಆತನ ಸಂಬಂಧಿಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಆದ್ರೆ 21ನೇ ತಾರೀಕು ಆಂಧ್ರದ ಸಿದ್ದರಾಮಪುರದ ಬಳಿ ಶವ ಸುಟ್ಟುಹಾಕಿದ್ದ ಸ್ಥಿತಿಯಲ್ಲಿ ಅಲ್ಲಿನ ತೋಟದ ಬಾವಿಯ ಬಳಿ ಪತ್ತೆಯಾಗಿತ್ತು. ನಂತ್ರ ಆಂಧ್ರ ಪೊಲೀಸರು ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ರು. ನಂತರ ಶವ ದೊರೆತ ತಕ್ಷಣ ಕೊಲೆ ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ಟವರ್ ಲೊಕೇಶನ್ ಹಾಗೂ ಸಿಸಿ ಟಿವಿ ಫೂಟೇಜ್ ಇಟ್ಕೊಂಡೇ ಕಿಡ್ನಾಪ್ ಆದ ಸ್ಥಳ ಹಾಗೂ ಕೊಲೆಯಾದ ಸ್ಥಳದಲ್ಲಿ ಸಿಮ್ ಕಾರ್ಡ್ ನ ಡಿಟೈಲ್ ಆಧರಿಸಿ ಇಬ್ಬರು ಆರೋಪಿಗಳಾದ ಕಾರ್ತಿಕ್ ಹಾಗೂ ವಂಶಿಯನ್ನು ಬಂಧಿಸಿದ್ದಾರೆ.
ತನಿಖೆಯ ವೇಳೆ ನಿಜಸಂಗತಿ ಬಾಯ್ಬಿಟ್ಟ ಆರೋಪಿಗಳು : ಇನ್ನು ಆರೋಪಿಗಳು ಬೇರೆಯವರ ಬಳಿ ಎರಡು ಲಕ್ಷದಷ್ಟು ಸಾಲವನ್ನ ಮಾಡಿಕೊಂಡಿದ್ದರು ಇದೇ ಕಾರಣಕ್ಕೆ ಆಂಧ್ರದಲ್ಲಿರೋ ಸ್ನೇಹಿತ ಬಲರಾಮನ ಬಳಿ ಸಹಾಯ ಕೇಳಿದ್ರು. ಈ ವೇಳೆ ಬಲರಾಮ ಬೆಂಗಳೂರಿನಿಂದ ಕಾರನ್ನ ಕಳ್ಳತನ ಮಾಡಿ ತರುವಂತೆ ಹೇಳಿದ್ದ ಬಲರಾಮನ ಅಣತಿಯಂತೆ ಕೊಲೆಯಾದ ನರಸಿಂಹನ ಕಾರು ಬುಕ್ ಮಾಡಿ ಚಾಲಕನ ಸಮೇತ ಇಂದೂಪುರಕ್ಕೆ ಕರೆದೊಯ್ದು ಅಲ್ಲಿ ಕಾರು ಚಾಲಕನನ್ನ ಕೊಲೆಗೈದು ಸಿದ್ದಾಪುರದ ಬಾವಿಗೆ ಎಸೆದಿದ್ದಾರೆ. ಇನ್ನುಈ ಕೃತ್ಯದಲ್ಲಿ 11 ವರ್ಷದ ಬಾಲಕ ಕೂಡ ಭಾಗಿಯಾಗಿರುವ ವಿಚಾರ ತಿಳಿದು ಬಂದಿದ್ದು ಬಲರಾಮನಿಗಾಗಿ ಪೊಲೀಸರು ಹುಡುಕಾಟ ನಡೆಸಿ ತನಿಖೆ ಮುಂದುವರೆಸಿದ್ದಾರೆ.