ಕೆ.ಆರ್.ಪುರಂ/ಬೆಂಗಳೂರು:ಕೌಟುಂಬಿಕ ಕಲಹ ಹಾಗೂ ಸಾಲದ ಸುಳಿಗೆ ಸಿಲುಕಿದ್ದ ಕ್ಯಾಬ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಿನಾಪುರದಲ್ಲಿ ನಡೆದಿದೆ.
ಕೌಟುಂಬಿಕ ಕಲಹ, ಸಾಲಬಾಧೆ ತಾಳದೆ ಕ್ಯಾಬ್ ಚಾಲಕ ಆತ್ಮಹತ್ಯೆ - ಕುಟುಂಬ ಕಲಹ, ಸಾಲಬಾಧೆ ಹಿನ್ನೆಲೆ
ಲಾಕ್ಡೌನ್ನಿಂದ ಯಾವುದೇ ಕೆಲಸವಿಲ್ಲದೆ ಮಾಡಿಕೊಂಡ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲಿಕಿದ್ದ. ಮತ್ತೊಂದೆಡೆ ಕುಟುಂಬದಲ್ಲಿ ಆಗಾಗ ಕಲಹಗಳು ನಡೆಯುತ್ತಿದ್ದವು. ಇದರಿಂದ ಮನನೊಂದ ಕ್ಯಾಬ್ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
![ಕೌಟುಂಬಿಕ ಕಲಹ, ಸಾಲಬಾಧೆ ತಾಳದೆ ಕ್ಯಾಬ್ ಚಾಲಕ ಆತ್ಮಹತ್ಯೆ Cab driver committed suicide at KR Puram](https://etvbharatimages.akamaized.net/etvbharat/prod-images/768-512-7271122-thumbnail-3x2-godu.jpg)
ಕ್ಯಾಬ್ ಚಾಲಕ ಆತ್ಮಹತ್ಯೆಗೆ ಶರಣು
ಕ್ಯಾಬ್ ಚಾಲಕ ಆತ್ಮಹತ್ಯೆಗೆ ಶರಣು
ಮಣಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕ್ಯಾಬ್ ಚಾಲಕನಾಗಿದ್ದು, ಲಾಕ್ಡೌನ್ನಿಂದ ಯಾವುದೇ ಕೆಲಸವಿಲ್ಲದೆ ಮಾಡಿಕೊಂಡ ಸಾಲವನ್ನು ತೀರಿಸಲಾಗದೆ ಸಂಕಷ್ಟಕ್ಕೆ ಸಿಲಿಕಿದ್ದ. ಮತ್ತೊಂದೆಡೆ ಕುಟುಂಬದಲ್ಲಿ ಆಗಾಗ ಕಲಹಗಳು ನಡೆಯುತ್ತಿದ್ದವಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಇಂದು ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಿದರು.