ಬೆಂಗಳೂರು:ಎನ್ಆರ್ಸಿ, ಸಿಎಎ ಕಿಚ್ಚು ಇನ್ನೂ ಮುಂದುವರೆದಿದೆ. ಇಂದು ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಭಾರತ್ ಬಂದ್ಗೆ ಕರೆ ಕೊಟ್ಟ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಗುಪ್ತಚರ ಇಲಾಖೆಯ ಎಡಿಜಿಪಿ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಕಲಬುರಗಿ ಎಸ್ಪಿಗಳಿಗೆ ಜಾಗೃತೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಎನ್ಆರ್ಸಿ, ಸಿಎಎ ವಿರೋಧಿಸಿ ಭಾರತ್ ಬಂದ್ಗೆ ಕರೆ: ನಿಗಾ ವಹಿಸಲು ಎಸ್ಪಿಗಳಿಗೆ ಸೂಚನೆ
ಎನ್ಆರ್ಸಿ, ಸಿಎಎ ಕಿಚ್ಚು ಇನ್ನೂ ಮುಂದುವರೆದಿದೆ. ಇಂದು ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಭಾರತ್ ಬಂದ್ಗೆ ಕರೆ ಕೊಟ್ಟ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಗುಪ್ತಚರ ಇಲಾಖೆಯ ಎಡಿಜಿಪಿ ಕ್ರಮ ಕೈಗೊಂಡಿದ್ದಾರೆ.
ಎನ್ಆರ್ಸಿ, ಸಿಎಎ ವಿರೋಧಿಸಿ ಭಾರತ್ ಬಂದ್: ಗುಪ್ತಚರ ಇಲಾಖೆಯಿಂದ ಆಯುಕ್ತರು, ಎಸ್ಪಿಗಳಿಗೆ ಸೂಚನೆ
ಗುಪ್ತಚರ ಇಲಾಖೆ ಎಸ್ಪಿಗಳಿಗೆ ನೋಟಿಸ್ ಮೂಲಕ ಸೂಚನೆ ನೀಡಿದ್ದು, ನೋಟಿಸ್ನಲ್ಲಿ ಈ ಕರೆಯನ್ನು ಬೆಂಬಲಿಸಿ ಮುಸ್ಲಿಂಮೇತರ ಸಂಘಟನೆ ಹಾಗೂ ಇತರೆ ಸಂಘಟನೆಗಳು ಕೂಡ ಬೆಂಬಲ ನೀಡಿ ಬಂದ್ ಸಮಯದಲ್ಲಿ ನಗರದಲ್ಲಿ ಅಹಿತಕರ ಘಟನೆ ನಡೆಸುವ ಸಾಧ್ಯತೆ ಇದೆ. ಆದರೆ ಯಾವುದೇ ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.